ಯಲವಟ್ಟಿ : ಶಾಲೆಗೆ ಡೆಸ್ಕ್‌ ವಿತರಣೆ

ಯಲವಟ್ಟಿ : ಶಾಲೆಗೆ ಡೆಸ್ಕ್‌ ವಿತರಣೆ

ಮಲೇಬೆನ್ನೂರು, ಮಾ.14- ಯಲವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿದ 10 ಡೆಸ್ಕ್‌ಗಳನ್ನು ಮಂಗಳವಾರ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್‌ ದೇವಾಡಿಗ ಅವರು ಹಸ್ತಾಂತರ ಮಾಡಿದರು.

ಗ್ರಾಮದ ಮುಖಂಡರಾದ ಡಿ. ಯೋಮಕೇಶ್ವರಪ್ಪ, ಜಿ. ಆಂಜನೇಯ, ಎಸ್‌ಡಿಎಂಸಿ ಅಧ್ಯಕ್ಷ ಕೆಂಚಪ್ಪ, ಪ್ರಭಾರ ಮುಖ್ಯ ಶಿಕ್ಷಕ ರವೀಂದ್ರಚಾರಿ, ಜಿಗಳಿ ವಲಯದ ಮೇಲ್ವಿಚಾರಕಿ ಪದ್ಮಾವತಿ, ಸೇವಾ ಪ್ರತಿನಿಧಿಗಳಾದ ಮಮತಾ, ಸೀತಾ ಶಾಲಾ ಶಿಕ್ಷಕರಾದ ರಾಘವೇಂದ್ರ, ಅನುರಾಧ ಮತ್ತು ವಿದ್ಯಾರ್ಥಿಗಳು ಈ ವೇಳೆ ಹಾಜರಿದ್ದರು.