ಮಲೇಬೆನ್ನೂರಿನಲ್ಲಿ ಇವಿಎಂ, ವಿವಿ ಪ್ಯಾಟ್ ಯಂತ್ರಗಳ ಪ್ರಾತ್ಯಕ್ಷತೆ

ಮಲೇಬೆನ್ನೂರಿನಲ್ಲಿ ಇವಿಎಂ,   ವಿವಿ ಪ್ಯಾಟ್ ಯಂತ್ರಗಳ ಪ್ರಾತ್ಯಕ್ಷತೆ

ಮಲೇಬೆನ್ನೂರು, ಮಾ. 14- ವಿಧಾನಸಭಾ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳ ಕಾರ್ಯವೈಖರಿ ಮತ್ತು ಉಪಯೋಗಿಸುವಿಕೆ ಕುರಿತಂತೆ ಮತದಾರರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಪ್ರಾತ್ಯಕ್ಷತೆಯನ್ನು ಇಲ್ಲಿನ ಪುರಸಭೆ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 191 ರಿಂದ 195 ರವರೆಗೆ ನಡೆಸಲಾಯಿತು. 

ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, ಉಪ ತಹಶೀಲ್ದಾರ್ ಆರ್. ರವಿ,  ಸೆಕ್ಟರ್ ಅಧಿಕಾರಿಗಳಾದ  ಪುರಸಭೆಯ ಪರಿಸರ ಇಂಜಿನಿಯರ್ ಉಮೇಶ್, ಕೃಷಿ ಅಧಿಕಾರಿ ಇನಾಯತ್ ಮತ್ತು ಪುರಸಭೆ ಸದಸ್ಯ ನಯಾಜ್ ಮತ್ತು ಮುಖಂಡರಾದ ಕೆ.ಪಿ. ಗಂಗಾಧರ್, ಭೋವಿ ಕುಮಾರ್, ಕೆ.ಎನ್. ತಿಪ್ಪೇಸ್ವಾಮಿ ಮತ್ತಿತರರು ಈ ವೇಳೆ ಹಾಜರಿದ್ದರು.