ನಾಳೆ ನಾಡೋಜ ಮುನಿವೆಂಕಟಪ್ಪಗೆ ಸನ್ಮಾನ

ನಾಳೆ ನಾಡೋಜ ಮುನಿವೆಂಕಟಪ್ಪಗೆ ಸನ್ಮಾನ

ಹರಪನಹಳ್ಳಿ, ಮಾ. 9- ಜನಪದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪನವರಿಗೆ ಎ. ನಾರಾಯಣಸ್ವಾಮಿ ಅಭಿಮಾನಿ ಬಳಗ ಹರಪನಹಳ್ಳಿ ತಾಲ್ಲೂಕು ಘಟಕದ ವತಿಯಿಂದ ಸನ್ಮಾನ ಸಮಾರಂಭವು   ಇದೇ 11ರ ಶನಿವಾರ ಪಟ್ಟಣದ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಹಲುವಾಗಲು ಎನ್. ರಮೇಶ್ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 10.30ಕ್ಕೆ ಸನ್ಮಾನ ಸಮಾರಂಭವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಉದ್ಘಾಟಿಸುವರು.

ದಲಿತ ಮುಖಂಡ ತೆಲಿಗಿ ಹನುಮಂತಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಪ್ರಗತಿಪರ ಚಿಂತಕ ಕಣಿವಿಹಳ್ಳಿ ಮಂಜುನಾಥ ಮಾತನಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕ ಜಿ. ಕರುಣಾಕರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ್ರು, ಸಹಕಾರ ಪ್ರಕೋಷ್ಠದ ಅಧ್ಯಕ್ಷ ಜಿ. ನಂಜನಗೌಡ್ರು, ನಿವೃತ್ತ ಐಎಎಸ್ ಅಧಿಕಾರಿ ಎಂ. ಲಕ್ಷ್ಮೀನಾರಾಯಣ, ಪಿ.ಮಹಾಬಲೇಶ್ವರಗೌಡ, ಸುವರ್ಣ ನಾಗರಾಜ, ಚಂದ್ರಶೇಖರ ಪೂಜಾರ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ, ಎ. ನಾರಾಯಣಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ರಾಜಪ್ಪ ಅಡವಿಹಳ್ಳಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಪ್ರಗತಿಪರ ಚಿಂತಕ ಕಣಿವಿಹಳ್ಳಿ ಮಂಜುನಾಥ್ ಮಾತನಾಡಿ, ತಾಲ್ಲೂಕಿಗೆ ಪ್ರಥಮ ಬಾರಿಗೆ ಕೇಂದ್ರ ಸಚಿವರಾದ ಎ.ನಾರಾಯಣ ಸ್ವಾಮಿಯವರು ಆಗಮಿಸುತ್ತಿದ್ದಾರೆ. ಅವರಿಗೆ ಸ್ವಾಗತವನ್ನು ಅದ್ಧೂರಿಯಾಗಿ ಕೋರಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ  ಮುನ್ನ ಪಟ್ಟಣದ ಐ.ಬಿ.ವೃತ್ತದಿಂದ ಬಾಬು ಜಗಜೀವನರಾಂ ಭವನದ ವರೆಗೂ ತಮಟೆ ಹಲಗೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಅಂದಾಜು 5 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಈ ಸಮಾರಂಭಕ್ಕೆ ತಾಲ್ಲೂಕಿನಾದ್ಯಂತ ದೇವದಾಸಿ ಮಹಿಳೆಯರು, ಸ್ತ್ರೀಶಕ್ತಿ ಸಂಘದ ಮಹಿಳಾ ಸದಸ್ಯರು, ಸಮಾಜದ ಬಂಧುಗಳು ಸೇರಿದಂತೆ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ನಿವೃತ್ತ ಪೊಲೀಸ್  ಮೈದೂರು ಪಕ್ಕೀರಪ್ಪ, ಮುತ್ತಿಗಿ ನಾಗಣ್ಣ, ಅಡಿವಿಹಳ್ಳಿ ರಾಜಪ್ಪ, ನಂದಿಬೇವೂರು ಚಾರ್ಯಪ್ಪ, ಕೆ.ಜಗದೀಶ, ಸಿಡ್ಲಪ್ಪ, ವಕೀಲ ಪ್ರಭು, ಸುರೇಶ, ಹನುಮಂತಪ್ಪ, ಕೆಂಚಪ್ಪ, ಇಂದ್ರಪ್ಪ  ಇತರರು ಸುದ್ದಿಗೋಷ್ಠಿಯಲ್ಲಿದ್ದರು.