ದೊಡ್ಡಮಾರಿಕಾಂಬ ದೇವಿ ಜಾತ್ರೆ ಆಹ್ವಾನ ಪತ್ರಿಕೆ ಬಿಡುಗಡೆ

ದೊಡ್ಡಮಾರಿಕಾಂಬ ದೇವಿ ಜಾತ್ರೆ ಆಹ್ವಾನ ಪತ್ರಿಕೆ ಬಿಡುಗಡೆ

ಜಗಳೂರು, ಮಾ.12- ಪಟ್ಟಣದ ದೊಡ್ಡ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಏಪ್ರಿಲ್ 25 ಮಂಗಳವಾರ ಗಂಗಾಪೂಜೆ, 26 ಮೀಸಲು ಅರ್ಪಣೆ, 27 ದೇವತಾ ಕಾರ್ಯ, 28 ನೇ ಶುಕ್ರವಾರ ರಥೋತ್ಸವ ಜರುಗುವುದು. ಏಪ್ರಿಲ್ 25 ರಿಂದ 28 ರವರೆಗೆ ಕಾಟ ಜಂಗೀ ಕುಸ್ತಿ ನಡೆಯಲಿವೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ಜೆ.ಎನ್. ಶಿವನ ಗೌಡ್ರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ್ ರೆಡ್ಡಿ, ತಿಪ್ಪೇಸ್ವಾಮಿ, ರವಿಕುಮಾರ್, ಓಬಳೇಶ್, ತಿಪ್ಪೇಸ್ವಾಮಿ, ಗೌರಿಪುರ ಶಿವಣ್ಣ, ಮಂಜುನಾಥ್, ರುದ್ರಮುನಿ,  ದತ್ತರಾಜ್, ರಾಜಣ್ಣ ಸೇರಿದಂತೆ ಭಾಗವಹಿಸಿದ್ದರು.