ಭರಮಸಾಗರದಲ್ಲಿ ಶ್ರೀ ಸೇವಾಲಾಲ್ ಜಯಂತಿ

ಭರಮಸಾಗರದಲ್ಲಿ ಶ್ರೀ ಸೇವಾಲಾಲ್ ಜಯಂತಿ

ಭರಮಸಾಗರ, ಫೆ.19- ಅಲೆಮಾರಿ ಜನಾಂಗ ಎಂದು ಕರೆಸಿಕೊಳ್ಳುವ ತಾಂಡಾಗಳನ್ನು ಕಂದಾಯ  ಗ್ರಾಮಗಳನ್ನಾಗಿ ಪರಿವರ್ತಿಸಿ, ಅವರಿಗೂ ಸಹ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಕೋಗುಂಡೆ ಕರಿಬಸಪ್ಪ ತಿಳಿಸಿದರು. 

ಗ್ರಾಮ ಪಂಚಾಯಿತಿಯಲ್ಲಿ ಆಚರಿಸಲಾದ   ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಊರಿಂದ ಊರಿಗೆ ಅಲೆದಾಡಿ ವ್ಯಾಪಾರ ವಹಿವಾಟು ನಡೆಸಿಕೊಂಡು ಜೀವನ ನಡೆಸುತ್ತಿದ್ದ ಜನರಿಗೆ ಸೂರು ಕಲ್ಪಿಸಿ ಅವರಿಗೆ ನಿರ್ಭಯವಾಗಿ ಜೀವನ ನಡೆಸಲು ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ.    ಅವರ ಹಾಡು ಸಂಸ್ಕೃತಿಯನ್ನು ಸೇವಾಲಾಲ್ ಸಂತರು ಊರೂರುಗಳಲ್ಲಿ ಸಂಚರಿಸಿ ಉಳಿಸಿ ದ್ದಾರೆ, ಅಂತಹ ವ್ಯಕ್ತಿ ಸಮಾಜದ ಎಲ್ಲ ಬಾಂಧವರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಶ್ರೀನಿವಾಸ್, ಜಹೀರ್, ಸಂತೋಷ್ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

error: Content is protected !!