ಯೋಗಾಸನ ಸ್ಪರ್ಧೆ: ಸಂತೋಷ್ ಪ್ರಥಮ

ಯೋಗಾಸನ ಸ್ಪರ್ಧೆ: ಸಂತೋಷ್ ಪ್ರಥಮ

ದಾವಣಗೆರೆ, ಮಾ.9- ವರ್ಷಿಣಿ ಯೋಗ ಎಜುಕೇಷನ್ ಅಂಡ್ ಕಲ್ಚರಲ್ ಸ್ಪೋರ್ಟ್ಸ್‌ ಟ್ರಸ್ಟ್ ವತಿಯಿಂದ 5ನೇ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಶಿವಮೊಗ್ಗದ ಚಿಗುರು ಸಭಾಂಗಣದಲ್ಲಿ ಇತ್ತಿಚೇಗೆ ಏರ್ಪಡಿಸಲಾಗಿತ್ತು.

31 ರಿಂದ 40ರ ವಯೋಮಿತಿ ವಿಭಾಗದ ಸ್ಪರ್ಧೆಯಲ್ಲಿ ನಗರದ ಸಂತೋಷ ಡಿ. (ಎಸ್.ಎಸ್. ಫಿಟ್‍ನೆಸ್ ಮತ್ತು ಯೋಗ ಇನ್‌ಸ್ಟಿಟ್ಯೂಟ್‍ನ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ತರಬೇತುದಾರರು) ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರೊಂದಿಗೆ ಜಿಲ್ಲೆಯ ಸೋಮೇಶ್ವರ ವಿದ್ಯಾಲಯದ ಸಂಜಯ್ ಎಸ್, ಸೂರ್ಯ.ಎಸ್, ವಿಷ್ಣುವರ್ಧನ ಹಾಲೋಳ್, ಮತ್ತಿಹಳ್ಳಿ ರೇವಣಪ್ಪ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಜಯರಾಜ್, ರಿಷಿ ಪಬ್ಲಿಕ್ ಶಾಲೆಯ ದೈವಿಕ್ ಆಚಾರ್ಯ, ತರಳಬಾಳು ಶಾಲೆಯ ಲೋಕೇಶ್, ಸ್ವರೂಪ ಹಾಗೂ ಹಿರಿಯ ವಿಭಾಗದಲ್ಲಿ ನಾಗರಾಜಪ್ಪ ವಿಜೇತರಾಗಿದ್ದಾರೆ.