ಕು. ಸೃಷ್ಟಿಗೆ `ಯೋಗ ರತ್ನ’ ಪ್ರಶಸ್ತಿ ಪ್ರದಾನ

ಕು. ಸೃಷ್ಟಿಗೆ `ಯೋಗ ರತ್ನ’ ಪ್ರಶಸ್ತಿ ಪ್ರದಾನ

ದಾವಣಗೆರೆ, ಮಾ.15- ವಿಭಿನ್ನ ಯೋಗ ನೃತ್ಯ ಪ್ರದರ್ಶನ ನೀಡಿದ ಹರಿಹರದ ಕು.ಸೃಷ್ಟಿ ಅವರಿಗೆ ಆಂಧ್ರ ಪ್ರದೇಶದ ಹೊಸಹಳ್ಳಿ ಪುರ ವರ್ಗ ಮಠದ ಶ್ರೀ ಶಂಭು ಲಿಂಗ ಶಿವಾಚಾರ್ಯ ಸ್ವಾಮೀಜಿ “ಯೋಗ ರತ್ನ” ಬಿರುದು ನೀಡಿ ಪುರಸ್ಕರಿಸಿದ್ದಾರೆ.

ಏಳನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಯೋಗ ಪ್ರದರ್ಶನಕ್ಕೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.

ಇತ್ತೀಚಗಷ್ಟೆ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿ ಗೌರವಿಸಿದ್ದರು.

ಮೈಸೂರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಫಲಕ ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದ ಸೃಷ್ಟಿ, ನಿನ್ನೆ ಆಂಧ್ರ ಪ್ರದೇಶದ ಹೊಸಹಳ್ಳಿ ಗ್ರಾಮದ ಪುರವರ್ಗ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ಜಾತ್ರಾ ಮಹೋತ್ಸವದಲ್ಲಿ ಯೋಗ ನೃತ್ಯ ಪ್ರದರ್ಶನ ನೀಡಿದ್ದಕ್ಕಾಗಿ ವಿಶೇಷ `ಯೋಗ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.

ಸೃಷ್ಟಿ ಈ ಹಿಂದೆ ನೇಪಾಳದ ಕಟ್ಮಂಡುವಿನಲ್ಲಿ ಸತತ ಸೂರ್ಯ ನಮಸ್ಕಾರ ಹಾಕಿ ಅಂತರರಾಷ್ಟ್ರೀಯ ದಾಖಲೆ ನಿರ್ಮಿಸಿದ್ದನ್ನು ಸ್ಮರಿಸಬಹುದು. ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಸೃಷ್ಟಿಗೆ ಹರಿಹರದ ನೀಲಕಂಠೇಶ್ವರ ಶಾಲೆಯ ಆಡಳಿತ ಮಂಡಳಿ,  ಸಂಘ ಸಂಸ್ಥೆಗಳು ಅಭಿನಂದಿಸಿವೆ.