ಸೇಂಟ್ ಜಾನ್ಸ್‌ ಶಾಲೆಯಲ್ಲಿ ಸ್ಫೂರ್ತಿ ದಿನಾಚರಣೆ

ಸೇಂಟ್ ಜಾನ್ಸ್‌ ಶಾಲೆಯಲ್ಲಿ ಸ್ಫೂರ್ತಿ ದಿನಾಚರಣೆ

ದಾವಣಗೆರೆ, ಮಾ. 17-  ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ಸರ್ಕಾರದ ಘೋಷಣೆಯಂತೆ, ಕರ್ನಾಟಕ ರತ್ನ ದಿ. ಪುನೀತ್‌ ರಾಜ್‌ಕುಮಾರ್ ಜನ್ಮ ದಿನವನ್ನು ಸ್ಫೂರ್ತಿ ದಿನವೆಂದು ಪುನೀತ್ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. 

ವಿದ್ಯಾಸಂಸ್ಥೆಯ ಖಜಾಂಚಿ ಪ್ರವೀಣ್‌ ಹುಲ್ಲುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಪುನೀತ್‌ ರಾಜ್‌ಕುಮಾರ್ ಅವರ ಆದರ್ಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬ ಸಲಹೆ ನೀಡಿದರು. 

ಕು. ಜಿ.ಸಿ. ಯಶಸ್ವಿ ಅವರು ದೊಡ್ಮನೆ ಹುಡುಗನ ಸಾಹಸ, ತ್ಯಾಗದ ಗುಣಗಳ ಬಗ್ಗೆ ತಿಳಿಸಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಮತ್ತು ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಪ್ರಾಂಶುಪಾಲರುಗಳು, ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.