ದಾವಣಗೆರೆ, ಮಾ.15- ನಗರದ ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್‍ಎಸ್‍ಎಸ್ ಘಟಕದಿಂದ ಗೋಪನಾಳ್ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಮಹಾದೇವಪ್ಪ ದಿದ್ದಿಗಿ ಅವರು ಗ್ರಾಮಸ್ಥರಿಗೆ ಮಣ್ಣಿನ ಆರೋಗ್ಯ ಮತ್ತು ಸಾವಯವ ಕೃಷಿ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲರು ಹಾಗೂ ಜೆಐಟಿ ನಿರ್ದೇಶಕ ಡಾ. ಡಿ.ಬಿ.ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕರಾದ ವೀರೇಶ್ ಕುಮಾರ್ ಕೆ. ಎಸ್., ಕೊಟ್ರೇಶ್ ಡಿ. ಎಸ್. ಎನ್ಎಸ್ಎಸ್ ವಿದ್ಯಾರ್ಥಿ ಸ್ವಯಂ ಸೇವಕರು ಮತ್ತು ಗ್ರಾಮದ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.