ದಾವಣಗೆರೆ, ಮಾ.15- ಎಸ್.ಜೆ.ಎಂ. ನಗರದ ಚಿಗುರು ವಿದ್ಯಾ ಸಂಸ್ಥೆಯ ಎ.ಪಿ.ಜೆ. ಪಬ್ಲಿಕ್ ಸ್ಕೂಲ್‌ನ ಆರನೇ ವಾರ್ಷಿಕೋತ್ಸವ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತಿ ದಾನಮ್ಮ ಸುಲ್ತಾನಪುರ ವಹಿಸಿದ್ದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎ.ಪಿ.ಜೆ. ಪಬ್ಲಿಕ್ ಸ್ಕೂಲ್ ಈ ಭಾಗದ ಬಡ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡುವ ಉದ್ದೇಶದ ಜೊತೆಗೆ ಮಕ್ಕಳಿಗೆ ಹಿಂದೂ ಸಂಸ್ಕೃತಿಯನ್ನು ಬೆಳೆಸುವಂತಹ ಶಾಲೆಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಹಾಗೂ ಕರ್ನಾಟಕ ಏಕತಾ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಎಚ್. ಹಾಲೇಶ್ ಮತ್ತು ಎ.ಪಿ.ಎಂ.ಸಿ. ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ. ಚಂದ್ರಶೇಖರ್ ಹಾಗೂ ಮಕ್ಕಳ ತಜ್ಞರಾದ ಡಾ. ಸುರೇಶ್ ಬಾಬು ಆಗಮಿಸಿದ್ದರು. ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಸಮ್ಮ ಹಾಗೂ ಸದಸ್ಯರುಗಳಾದ ಪರಶುರಾಮ್, ಲಕ್ಷ್ಮಣ್, ಭರತ್ ರಾಯಬಾಗಿ ಮತ್ತು ಶಾಲೆಯ ಮುಖ್ಯ ಶಿಕ್ಷಕರಾದ ಗೀತಾ ಕೆ.ಎಂ. ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು.