ಸಾಸ್ವೆ ಹಳ್ಳಿ, ಜ.9- ಹಾಸನದಲ್ಲಿ ನಡೆದ 3ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾ ವಳಿಯಲ್ಲಿ ಕಮ್ಮಾರ ಘಟ್ಟೆಯ ಪೋದಾರ್ ಲರ್ನ್ ಶಾಲೆಯ 5 ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ತಿಪ್ಪೇಸ್ವಾಮಿ ನಾಯಕ್ ತಿಳಿಸಿದ್ದಾರೆ. ಪ್ರಥಮ್ ಪೂಜಿತ್ ವಿದ್ಯಾರ್ಥಿ ಬಂಗಾರ ಪದಕ ಪಡೆದಿದ್ದರೆ, ಜಾನವಿ, ಬಿ.ಜಿ.ಭೂಮಿಕಾ, ಭುವನ್ ಮತ್ತು ಯುವರಾಜ್ ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ತಿಪ್ಪೇಸ್ವಾಮಿ ನಾಯಕ್ ಅಭಿನಂದಿಸಿದ್ದಾರೆ.
October 15, 2024