`ಶಿವದೂತ ಗುಳಿಗ’ ಪೋಸ್ಟರ್ ಬಿಡುಗಡೆ

`ಶಿವದೂತ ಗುಳಿಗ’ ಪೋಸ್ಟರ್ ಬಿಡುಗಡೆ

ದಾವಣಗೆರೆ, ಮಾ. 14- ಬರುವ ಏಪ್ರಿಲ್ 11 ರಂದು ನಡೆಯುವ ಶಿವದೂತ ಗುಳಿಗ ನಾಟಕದ ಪೋಸ್ಟರ್‌ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅನಾವರಣಗೊಳಿಸಿದರು.

ನಗರದ ಸವಿಡೈನ್ ಮಹೇಶ್ ಶೆಟ್ಟಿ ಗೆಳೆಯರ ಬಳಗದ ಆಶ್ರಯದಲ್ಲಿ  ಸ್ಥಳೀಯ ಶಿವಯೋಗ ಮಂದಿರದ ಆವರಣದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಯೋಜಿಸಿರುವ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದ ಕಾಂತಾರ ಕನ್ನಡ ಚಲನಚಿತ್ರದ ಖ್ಯಾತಿಯ ಕಲಾಸಂಗಮದ ಕಲಾವಿದರಾದ ಸ್ವರಾಜ್ ಶೆಟ್ಟಿ ಅಭಿನಯಿಸುವ ಶಿವದೂತ ಗುಳಿಗ ಎಂಬ ವಿಭಿನ್ನ ಶೈಲಿಯ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. 

ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಆಯೋಜಕರಾದ ಮಹೇಶ ಶೆಟ್ಟಿ, ರಾಜು ಭಂಡಾರಿ, ಶ್ರೀಕಾಂತ್ ಬಗರೆ ಉಪಸ್ಥಿತರಿದ್ದರು.