ನಂದಗೋಕುಲ ಶಾಲೆಯಲ್ಲಿ ಮಹಿಳಾ ದಿನಾಚರಣೆ

ನಂದಗೋಕುಲ ಶಾಲೆಯಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.14- ನಂದಗೋಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾ ರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಮಹಿಳಾ  ದಿನಾಚರಣೆಯನ್ನು ಆಚರಿಸ ಲಾಯಿತು. ಅಧ್ಯಕ್ಷತೆಯನ್ನು ಶ್ರೀ ಮಾತಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ವೈ.ಬಿ. ಸತೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ರಾದ ಶ್ರೀಮತಿ ಸರಳ ಗೌರೋಜಿ, ಶ್ರೀಮತಿ ಶಿವಲೀಲಾ, ಜೈ ವೀರ ಹನುಮಾನ್ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಜನ ಸಂಘದ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿದೇವಿ, ಎಸ್.ಎಮ್. ಕೃಷ್ಣ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಗಂಗಾಧರ್., ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜ್ಯೋತಿ, ನಂದಗೋಕುಲ ಶಾಲೆಯ ಕಾರ್ಯ ದರ್ಶಿ ಶ್ರೀಮತಿ ಬಿ. ಅನುಸೂಯ, ಮುಖ್ಯೋಪಾಧ್ಯಾ ಯಿನಿ ಶ್ರೀಮತಿ ರೆಹನಾ ಬಾನು ನಾಸಿಕ ಉಪಸ್ಥಿತರಿದ್ದರು.