ದೊಡ್ಡಬಾತಿಯಲ್ಲಿ ಗಣಿತ ಕಲಿಕಾ ಸ್ಪರ್ಧೆ

ದೊಡ್ಡಬಾತಿಯಲ್ಲಿ ಗಣಿತ ಕಲಿಕಾ ಸ್ಪರ್ಧೆ

ದಾವಣಗೆರೆ, ಮಾ.13- ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯನ್ನು ದೊಡ್ಡಬಾತಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಸಲಾಯಿತು. 

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಷನ್ (ದೊಡ್ಡಬಾತಿ) ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಿನ್ನೆ ಏರ್ಪಾಡಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾತಿ ಕನ್ನಪ್ಳ ಶಿವಕುಮಾರ್, ಸದಸ್ಯರಾದ ಜೆಸಿಬಿ ಹನುಮಂತಪ್ಪ, ಬಂಗಾರಮ್ಮ, ವಿನುತಾ ವಿಜಯಕುಮಾರ್, ರಾಜಪ್ಪ, ಮಂಜುಳಾ, ಪಿಡಿಒ ಸೋಮಶೇಖರ್, ಗಣಿತ ನೋಡಲ್ ಅಧಿಕಾರಿ ಬಿ.ಡಿ.ಕಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವನಾಥ್ ಗಣೇಶ್ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.