ಚಳ್ಳಕೆರೆಯ ಕರೀಕೆರೆಯಲ್ಲಿ ಜಂತುಹುಳು ಮಾಹಿತಿ ಆರೋಗ್ಯ ಶಿಕ್ಷಣ

ಚಳ್ಳಕೆರೆಯ ಕರೀಕೆರೆಯಲ್ಲಿ ಜಂತುಹುಳು ಮಾಹಿತಿ ಆರೋಗ್ಯ ಶಿಕ್ಷಣ

ಚಳ್ಳಕೆರೆ, ಮಾ. 13- ಕರೀಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜಂತುಹುಳು ಬಗ್ಗೆ ಆರೋಗ್ಯ ಶಿಕ್ಷಣ ಹಾಗೂ ಮಾಹಿತಿ ತಿಳಿಸಿ ಮಾತ್ರೆ ನೀಡಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಆರೋಗ್ಯ ನಿರೀ ಕ್ಷಣಾಧಿಕಾರಿ ಸಿ.ಎನ್. ನವೀನ್ ಕುಮಾರ್ ಮಾತನಾಡಿ, ಜಂತು ಹುಳ ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು, ಈ ಮಾತ್ರೆಯನ್ನು ಆರು ತಿಂಗಳಿಗೆ ಒಮ್ಮೆ ತೆಗೆದುಕೊಳ್ಳಬೇಕು, ಜಂತುಹುಳು ಸಮಸ್ಯೆಗೆ ಇದು ಸರಳ ಸುಲಭ ವಿಧಾನವಾಗಿದೆ ಎಂದು ವಿಸ್ತಾರವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಜಪ್ಪ, ಸಹ ಶಿಕ್ಷಕರಾದ ಸಣ್ಣಲಿಂಗಮ್ಮ, ರಾಧಾ, ಪ್ರೇಮಕುಮಾರ್, ಆಶಾ ಕಾರ್ಯಕರ್ತೆ ಭಾಗ್ಯಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.