ಇನ್ನರ್ ವ್ಹೀಲ್ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ಇನ್ನರ್ ವ್ಹೀಲ್ ಸಂಸ್ಥೆಯಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 13-  ವಿದ್ಯಾನಗರದ ಮಾಗನೂರು ಬಸಪ್ಪ ರೋಟರಿ ಭವನದಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಾಯತ್ರಿ ಸಿದ್ದೇಶ್ವರ, ಪುರುಷರ ಬೆಂಬಲವಿಲ್ಲದೆ ಮಹಿಳೆ ಯರು ಉನ್ನತ ಮಟ್ಟಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಇನ್ನರ್ ವ್ಹೀಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಸುಲೋಚನ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಂಜುಳ ಮತ್ತು ಪದಾಧಿಕಾ ರಿಗಳು ಹಾಜರಿದ್ದರು. ಇದೇ ವೇಳೆ ಆದರ್ಶ ಅತ್ತೆ-ಸೊಸೆ ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಸುಜಾತ ಚಂದ್ರಾಚಾರ್‌, 85 ವರ್ಷದ ಹಿರಿಯ ಮಹಿಳೆ, ತಲೆ ಮೇಲೆ ಸೊಪ್ಪು ಹೊತ್ತು ಮಾರುವ 89 ವರ್ಷದ ವೃದ್ಧೆಯನ್ನು ಸನ್ಮಾನಿಸಲಾಯಿತು.