ಅಕ್ಕಮಹಾದೇವಿ, ಮಹಿಳಾ ಸೇವಾ ಸಮಾಜದಿಂದ ಮಹಿಳಾ ದಿನಾಚರಣೆ

ಅಕ್ಕಮಹಾದೇವಿ, ಮಹಿಳಾ ಸೇವಾ ಸಮಾಜದಿಂದ ಮಹಿಳಾ ದಿನಾಚರಣೆ

ದಾವಣಗೆರೆ, ಮಾ. 14- ನಗರದ ಅಕ್ಕಮಹಾದೇವಿ ಸಮಾಜ ಹಾಗೂ ಮಹಿಳಾ ಸೇವಾ ಸಮಾಜದ  ವತಿಯಿಂದ ಹುಣ್ಣಿಮೆ ಕಾರ್ಯಕ್ರಮ ಹಾಗೂ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಶ್ರೀಮತಿ ನೀಲಗುಂದ ಜಯಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪನ್ಯಾಸಕರಾದ ಶ್ರೀಮತಿ ಸೌಭಾಗ್ಯ ಹಿರೇಮಠ ಅವರು ಮಾತನಾಡಿದರು.  ನೀಲಗುಂದ ಜಯಮ್ಮ ಅವರಿಂದ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. ಶ್ರೀಮತಿ ದೊಗ್ಗಳ್ಳಿ ಸುವರ್ಣಮ್ಮ, ಉಮಾ ವೀರಭದ್ರಪ್ಪ, ಶಾಂತಾ ಯಾವಗಲ್ ಹಾಗೂ  ಇತರರು ಉಪಸ್ಥಿತರಿದ್ದರು.

ಶ್ರೀಮತಿ ಶಾಂತಾ ಮೆಡ್ಲೇರಿ ಪ್ರಾರ್ಥಿಸಿದರು. ಶ್ರೀಮತಿ ಪುಷ್ಪಾ ಗುಂಡಿ ಸ್ವಾಗತಿಸಿದರು. ಶ್ರೀಮತಿ ಸುನೀತಾ ಇಂದೂಧರ ಕಾರ್ಯಕ್ರಮ ನಿರೂಪಿಸಿದರು.