ಮಾನ್ಯರೇ,
`ವಿವಾಹ ಆಗಲು ವಧು ಬೇಕಾಗಿದೆ ಎಂದು ಪ್ರತಿಭಟನೆ’ ಡಿಸೆಂಬರ್ 23ರ ಬಹುತೇಕ ಪತ್ರಿಕೆಗಳಲ್ಲಿ ವೈರಲ್ ಸುದ್ಧಿ ಬಂದಿದೆ. ಮದುವೆಯ ಧಿರಿಸಿನಲ್ಲಿ 50 ಮದುಮಕ್ಕಳು ಭಾಜಾ, ಭಜಂತ್ರಿ ಸಮೇತ ಕುದುರೆಗಳ ಸವಾರಿ ಮಾಡ್ತಾ ಸಾಗಿ ಬಂದದ್ದು ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಗೆ… ನಮಗೆ ವಧುಗಳನ್ನು ಹುಡುಕಿಕೊಡಿ ಎಂದು ಕೇಳಲು… ಇದಕ್ಕೆ ಕಾರಣ ಭ್ರೂಣ ಹತ್ಯೆ ಪಿಡುಗು ನಿವಾರಣೆ ಕುರಿತು ಗಮನ ಸೆಳೆಯುವ ದೆಸೆಯಿಂದ…. ಎಂದು ಮೇಲ್ನೋಟಕ್ಕೆ ಎಂದು ನನ್ನ ಅಭಿಪ್ರಾಯ.
ಆದರೆ….ಭ್ರೂಣ ಹತ್ಯೆ ಕಾನೂನಿನಲ್ಲಿ ಅಪರಾಧ ಎಂದು ಎಲ್ಲರಿಗೂ ತಿಳಿದ ವಿಷಯ… ಇದಕ್ಕೂ ಮಿಗಿಲಾಗಿ ಮದುವೆಯ ವಯಸ್ಸಿನ ವಧು ಹಾಗೂ ವಧುವಿನ ತಂದೆ, ತಾಯಿ, ಮಗಳು ಅಲ್ಪಸ್ವಲ್ಪ ಓದಿದ್ದರೂ…ತಮ್ಮ ಮಗಳ ಮದುವೆಗೆ ಎಷ್ಟೇ ಖರ್ಚಾಗಲೀ ಸರ್ಕಾರಿ ನೌಕರಿ ಇರುವ ವರ, ಇಲ್ಲವೇ ಸಾಫ್ಟ್ವೇರ್ ವರನೇ ಆಗಬೇಕೆನ್ನುವ ಅಭಿಲಾಷೆ…. ಇಂದಿನ ದಿನಗಳಲ್ಲಿ ಹೆಚ್ಚಾಗಿದೆ.
ಸಾಕಷ್ಟು ಜಮೀನು ಇರುವ ರೈತನ ಮಕ್ಕಳಿಗೆ, ವ್ಯಾಪಾರ ಮಾಡಿ ದುಡಿಯುವ ವರನಿಗೆ, ಹತ್ತಾರು ಹೊಲಿಗೆ ಯಂತ್ರ ಇಟ್ಟು ಟೈಲರಿಂಗ್ ಮಾಡಿ ಒಳ್ಳೆಯ ಸಂಪಾದನೆ ಮಾಡುವ ವರನಿಗೆ ಹೆಣ್ಣನ್ನು ಕೊಡಲು ಬಯಸುವುದಿಲ್ಲ. ವರನಿಗೆ ಒಳ್ಳೆಯ ದುಡುಮೆ ಇದೆ ಮಗಳಿಗೆ ಕೊಟ್ಟು ವಿವಾಹ ಮಾಡುವ ಎಂಬ ಮನಸ್ಸು ವಧುವಿನ ತಂದೆಗೆ ಇದ್ದರೂ… ವಧು ಹಾಗೂ ವಧುವಿನ ತಾಯಂದಿರು ಮಾತ್ರ ತಮ್ಮ ಅಳಿಯ ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿರಬೇಕು. ತಮ್ಮ ಬಂಧುಗಳ ನಡುವೆ… ನಮ್ಮ ಅಳಿಯ ಸಾಫ್ಟ್ವೇರ್ ಎಂಜಿನಿಯರ್ ಎಂದು ಹೇಳಿಕೊಳ್ಳಲು ಬಯಸುವವರೇ ಹೆಚ್ಚಾಗಿದೆ.
– ರಘುನಾಥರಾವ್ ತಾಪ್ಸೆ, ದಾವಣಗೆರೆ.