ವರದಿಗಾರರ ಕೂಟದ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಆಯ್ಕೆ

ವರದಿಗಾರರ ಕೂಟದ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಆಯ್ಕೆ - Janathavaniಕಾರ್ಯದರ್ಶಿ ಸಿ. ವರದರಾಜ್, ಖಜಾಂಚಿಯಾಗಿ ಮಧು ನಾಗರಾಜ್

ದಾವಣಗೆರೆ, ಮಾ.6- ದಾವಣಗೆರೆ ವರದಿಗಾರರ ಕೂಟದ ನೂತನ ಅಧ್ಯಕ್ಷರಾಗಿ ಕೆ. ಏಕಾಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ವರದಿಗಾರರ ಕೂಟ ದಲ್ಲಿ ನಿಕಟಪೂರ್ವ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾಗಿ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿಯಾಗಿ ಮಧು ನಾಗರಾಜ್ ಕುಂದುವಾಡ ಅವಿರೋಧ ಆಯ್ಕೆ ಯಾಗಿದ್ದಾರೆ.

ಈ ಸಂದರ್ಭದಲ್ಲಿ ಕೂಟದ ಮಾಜಿ ಅಧ್ಯಕ್ಷರುಗಳಾದ ಬಿ.ಎನ್. ಮಲ್ಲೇಶ್, ಬಸವರಾಜ್ ದೊಡ್ಮನಿ, ಹಿರಿಯ ಪತ್ರಕರ್ತ ತಾರಾನಾಥ್, ನಾಗರಾಜ್ ಬಡದಾಳ್, ಮಂಜುನಾಥ್ ಕಾಡಜ್ಜಿ, ರಂಗನಾಥ್ ರಾವ್, ಸುರೇಶ್ ಕುಣಿಬೆಳಕೆರೆ, ಪವನ್‌ಕುಮಾರ್, ಮಲ್ಲಿಕಾರ್ಜುನ್, ವೀರೇಶ್, ಸಿದ್ದಯ್ಯ, ವಿನಾಯಕ್ ಪೂಜಾರ್, ಗಣೇಶ್ ಕಮ್ಲಾಪುರ, ದೇವಿಕಾ, ತೇಜಸ್ವಿನಿ, ಭಾರತಿ, ಮಹಾದೇವ್, ಬಾಲಕೃಷ್ಣ ಶಿಬಾರ್ಲ, ಹೆಚ್.ಎಂ.ಪಿ. ಕುಮಾರ್,  ಸಂಜಯ್, ಪುನೀತ್ ಆಪ್ತಿ, ಸಿಖಂದರ್, ಫಕೃದ್ದೀನ್, ಆರ್. ರವಿ, ಜೈಮುನಿ, ಕೆ.ಸಿ. ಮಂಜುನಾಥ್, ಹೆಚ್.ಎನ್. ಪ್ರಕಾಶ್, ಚಂದ್ರಶೇಖರ್, ನಂದೀಶ್, ರವಿಬಾಬು, ಡಾ. ಬಿ. ವಾಸುದೇವ್, ವೀಡಿಯೋ ಜರ್ನಲಿಸ್ಟ್‌ಗಳಾದ ರಾಮು, ಶಾಂತಕುಮಾರ್, ರಮೇಶ್, ಕಿರಣ್ ಸೇರಿದಂತೆ ಕೂಟದ ಸದಸ್ಯರು ಪಾಲ್ಗೊಂಡಿದ್ದರು.

error: Content is protected !!