ರಾಷ್ಟ್ರಮಟ್ಟಕ್ಕೆ ಕುಸ್ತಿ ಪಟುಗಳ ಆಯ್ಕೆ

ದಾವಣಗೆರೆ, ಮಾ.2- ಹರಿಯಾಣ ರಾಜ್ಯದ ಚಂಡಿಘಡದಲ್ಲಿ ಇದೇ ದಿನಾಂಕ 5 ರಿಂದ 8 ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಗೆ ನಗರದ ದಾವಣಗೆರೆ ನ್ಯಾಯಾಂಗ ಇಲಾಖೆಯ ಭೂಲಕ್ಷ್ಮಿ 59 ಕೆ.ಜಿ. ವಿಭಾಗ, ಟಿ.ಬಿ.ಸುರೇಶ್ 76 ಕೆ.ಜಿ. ವಿಭಾಗ ಹಾಗೂ ಇ.ಎಸ್.ಐ. ಆಸ್ಪತ್ರೆಯ ಶುಶ್ರೂಷಕಿ ಪಿ.ಎಂ. ಕವಿತ 57 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸುವರು .

ಇವರುಗಳು ಕ್ರೀಡೆಯಲ್ಲಿ ಯಶಸ್ಸು ಪಡೆಯಲಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷಿ, ರಾಷ್ಟ್ರೀಯ ಕ್ರೀಡಾಪಟು- ವಾರ್ತಾ ಇಲಾಖೆಯ ಬಿ.ಎಸ್.ಬಸವರಾಜ್  ಶುಭ ಹಾರೈಸಿದ್ದಾರೆ.

error: Content is protected !!