ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷರಾಗಿ ಎನ್.ವಿ. ಸತೀಶ್ ಆಯ್ಕೆ

ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷರಾಗಿ ಎನ್.ವಿ. ಸತೀಶ್ ಆಯ್ಕೆ - Janathavaniದಾವಣಗೆರೆ, ಫೆ.18- ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ದಾವಣಗೆರೆ ಜಿಲ್ಲಾ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಎಂ.ಬಿ. ಜಗದೀಶ್ವರಪ್ಪ, ಅಧ್ಯಕ್ಷರಾಗಿ ಹದಡಿ ಪದವಿ ಪೂರ್ವ ಕಾಲೇಜಿನ ಎನ್.ವಿ. ಸತೀಶ್, ಉಪಾಧ್ಯಕ್ಷರಾಗಿ ಹರಿಹರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶ್ರೀಮತಿ ಯಶೋಧ, ಪ್ರಧಾನ ಕಾರ್ಯದರ್ಶಿಯಾಗಿ ಆವರಗೆರೆ ಸರ್ಕಾರಿ ಪ್ರೌಢಶಾಲೆಯ ಶ್ರೀಮತಿ ಸರಸ್ವತಿ, ಸಹ ಕಾರ್ಯದರ್ಶಿಯಾಗಿ ಜಗಳೂರು ದಿವ್ಯಭಾರತಿ ಪ್ರೌಢಶಾಲೆಯ ಡಿ. ರಮೇಶ್, ಖಜಾಂಚಿಯಾಗಿ ನಾಗನೂರು ಸರ್ಕಾರಿ ಪ್ರೌಢಶಾಲೆಯ ಹೊನ್ನೇಶ್ ಆಯ್ಕೆಯಾಗಿದ್ದಾರೆ.

 ಸಂಘಟನಾ ಕಾರ್ಯದರ್ಶಿಗಳಾಗಿ ಹೊನ್ನಾಳಿಯ ಶ್ರೀಮತಿ ಭಾರತಿ, ಹರಿಹರದ ಶ್ರೀಮತಿ ಫರೀದಾ ಬೇಗಂ, ಜಗಳೂರಿನ ಎಂ.ಹೆಚ್. ಮಾಲತೇಶ್, ದಾವಣಗೆರೆ ಉತ್ತರ ವಲಯದ ನಾಗರಾಜನಾಯ್ಕ, ದಕ್ಷಿಣ ವಲಯದ ನಾಗರಾಜ, ಚನ್ನಗಿರಿಯ ಶಿವಣ್ಣ ಆಯ್ಕೆಗೊಂಡಿದ್ದಾರೆ.

error: Content is protected !!