Category: ದಾವಣಗೆರೆ

Home ದಾವಣಗೆರೆ

ಈ ಬಾರಿ ಶೇ.85ಕ್ಕಿಂತ ಹೆಚ್ಚು ದಾಖಲೆ ಮತದಾನ ಆಗಬೇಕು

ಪ್ರಸ್ತುತ 18ನೇ ಲೋಕಸಭಾ ಚುನಾವಣೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಮತದಾನವಾಗುವಂತೆ  ಮಾಡಿ, ಹೊಸ ದಾಖಲೆ ನಿರ್ಮಿಸುವಂತೆ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಿಳಿಸಿದರು.

ಪಠ್ಯಪುಸ್ತಕಗಳಿಗೆ ಸೀಮಿತರಾಗದೆ, ಸಾಮಾಜಿಕ ಕಾಳಜಿಯ ಜಾಗೃತಿ ಕಡೆಗೆ ಗಮನ ಹರಿಸಬೇಕು

ನಮ್ಮ ದೇಶವನ್ನು ಆಳುವ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವ ಹಂತದಲ್ಲಿ ಜಾಗೃತಿ ಯೊಂದಿಗೆ ಮತದಾನ ಮಾಡುವುದರ ಜೊತೆಗೆ ಜವಾಬ್ದಾರಿ ಮತ್ತು ಬದ್ಧತೆಯಿಂದ ನಮ್ಮ ದೇಶದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು

ಸಿದ್ದಮ್ಮ ಪಾರ್ಕ್‌ ಬೆಂಚ್‍ಗಳಿಗೆ ಸುಣ್ಣ-ಬಣ್ಣ

ನಗರದ ಕೆ.ಬಿ ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌ನಲ್ಲಿರುವ ಈ ಹಿಂದೆ ದಾನಿಗಳು ನೀಡಿದ 32 ಕ್ಕೂ ಹೆಚ್ಚು ಬೆಂಚ್‍ಗಳು ಮತ್ತು ಕುಟೀರಕ್ಕೆ ದಾನಿಗಳು ನೀಡಿದ ಬಣ್ಣದಿಂದ ಶೃಂಗಾರಗೊಂಡಿವೆ. 

ನವಸ್ಥಾನದಲ್ಲಿ ಶನೇಶ್ವರ ಸ್ವಾಮಿ ಮಹಾಯಾಗ ಸಂಪೂರ್ಣ

ಕೊಪ್ಪದಾಂಬ ಸೇವಾ ಟ್ರಸ್ಟ್‌ ವತಿಯಿಂದ ನಗರದ ಹದಡಿ ರಸ್ತೆಯ ಕೊಂಡಜ್ಜಿ ಬಸಪ್ಪ ವೃತ್ತದ ಬಳಿಯ ಪುಣ್ಯಕ್ಷೇತ್ರ ನವ ಸ್ಥಾನದಲ್ಲಿ  ಇತ್ತೀಚೆಗೆ ಶ್ರೀ ಮಹಾ ಪ್ರತ್ಯಂಗಿರಾ ಹೋಮ, ಶನೇಶ್ವರ ಸ್ವಾಮಿ ಮಹಾಯಾಗ ಶ್ರದ್ಧಾ ಭಕ್ತಿಯಿಂದ ಜರುಗಿತು.

ಪಶು-ಪಕ್ಷಿಗಳ ನೀರಿನ ದಾಹ ನಿವಾರಣೆಗೆ ಕರುಣಾದಿಂದ ಬಾನಿಗಳ ವ್ಯವಸ್ಥೆ

ಮೂಕ ಪ್ರಾಣಿ-ಪಕ್ಷಿಗಳಿಗೆ  ನೀರುಣಿಸುವ ಉದ್ದೇಶದಿಂದ ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸರಸ್ವತಿ ನಗರ, ಎಂ.ಸಿ.ಸಿ `ಬಿ’ ಬ್ಲಾಕ್, ಎನ್. ಆರ್. ರಸ್ತೆ, ಶಿವಕುಮಾರ ಸ್ವಾಮಿ ಬಡಾವಣೆ, ಕೆ.ಇ.ಬಿ ಸರ್ಕಲ್ ಮುಂತಾದೆಡೆಯಲ್ಲಿ   20  ಕುಡಿಯುವ ನೀರಿನ ತೊಟ್ಟಿಗಳನ್ನು  ಇಡುವ ವ್ಯವಸ್ಥೆ ಮಾಡಲಾಗಿದೆ.

ಚುನಾವಣಾ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಚಾಲನೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ  ಮೇ 7 ರಂದು ಚುನಾವಣೆ ನಡೆಯುತ್ತಿದ್ದು, ಮತದಾನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ ವೆಂಕಟೇಶ್  ಅವರು ಇಂದು ಚಾಲನೆ ನೀಡಿದರು.

ದುರ್ಗಂಬಿಕಾ ದೇವಿ ಜಾತ್ರೆ : ರೆಡ್ ಕ್ರಾಸ್‌ನಿಂದ ರಕ್ತದಾನ ಶಿಬಿರ

ನಗರ ದೇವತೆ ಶ್ರೀ ದುರ್ಗಂಬಿಕಾ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಂಬಿಕಾ ದೇವಿ ಟ್ರಸ್ಟ್  ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ (ದಾವಣಗೆರೆ) ಇವರುಗಳ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಾತ್ರೋತ್ಸವದಲ್ಲಿ ನಡೆಸಲಾಯಿತು. 

ಏಪ್ರಿಲ್ 1 ರಿಂದ ಒಂದು ತಿಂಗಳ ಕಾಲ ಜಾನುವಾರುಗಳಿಗೆ ಲಸಿಕಾಕರಣ

ಜಾನುವಾರುಗಳಲ್ಲಿ ಕಂಡುಬರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏಪ್ರಿಲ್ 1ರಿಂದ ಏಪ್ರಿಲ್ 30 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ. ತಿಳಿಸಿದರು.

ಇ-ವೇ ಬಿಲ್ ನೀಡಿಕೆಯಲ್ಲಿ ವ್ಯತ್ಯಾಸ 400 ವಾಟರ್ ಕೂಲರ್‍ಗಳ ವಶ

ಬಾಂಬೆಯಿಂದ ದಾವಣಗೆರೆಗೆ ಪೂರೈಕೆ ಮಾಡಿದ 400 ವಾಟರ್ ಕೂಲರ್‍ಗಳ ಇ-ವೇ ಬಿಲ್ ಸೃಜನೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಸಿರಿಗೆರೆ : ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಆರೋಗ್ಯ ತಪಾಸಣೆ

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆಯ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

error: Content is protected !!