ದಾವಣಗೆರೆ, ಆ.29- ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಆದೇಶದನ್ವಯ ಸ್ಥಳೀಯ ಜೆ. ಇಮಾಂ ನಗರದ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವಕ್ಫ್ ಸಂಸ್ಥೆಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೇರ ಆಡಳಿತಕ್ಕೆ ಒಳಪಡಿಸಲಾಗಿದೆ.
ಜಿಲ್ಲೆಯ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಮ್ ಪಾಷ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಎ.ಎ. ಖತೀಬ್, ಅಯುಬ್ ಪೈಲ್ವಾನ್, ಅಬ್ದುಲ್ ಘನಿ ತಾಹೇರ್, ಎಂ.ಬಿ. ಮೊಹಮ್ಮದ್ ಲಿಯಾಖತ್ ಅಲಿ ರಜ್ವಿ, ಆರೀಫ್ ಖಾನ್ ಇವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಮ್ ಪಾಷ ತಿಳಿಸಿದ್ದಾರೆ.