ಎಂಇಎಸ್ ವಿರುದ್ಧ ಕನ್ನಡಪರ ಸಂಘಟನೆಗಳ ಒಕ್ಕೂಟದ ಆಕ್ರೋಶ

ದಾವಣಗೆರೆ, ಆ.29- ಬೆಳಗಾವಿ ಜಿಲ್ಲೆಯ ಪೀರನ ವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ದಲ್ಲಿ ಪುಂಡಾಟ ನಡೆಸಿದ ಎಂಇಎಸ್ ಕಾರ್ಯಕರ್ತರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಜಯದೇವ ವೃತ್ತದಲ್ಲಿ ನಿನ್ನೆ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. 

ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ. ಯಲಪ್ಪ ಮಾತನಾಡಿ,  ನಗರದ ಹಳೇ ಭಾಗದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸಲಾಗಿದ್ದು, ನಾವು ಮರಾಠಿಗರನ್ನು ಇಷ್ಟಪಡುತ್ತೇವೆಯೇ ಹೊರತು ಎಂಇಎಸ್ ಪುಂಡರನ್ನಲ್ಲ. ಬೆಳಗಾವಿಯ ಮಹಾರಾಷ್ಟ್ರ ಗಡಿಭಾಗದ ಮರಾಠಿಗರು ಇದನ್ನು ಅರ್ಥಮಾಡಿಕೊಳ್ಳಬೇಕು. ಕನ್ನಡಿಗರು ಯಾವ ಭಾಷೆ, ಜಾತಿಯನ್ನು ವಿರೋಧಿಸಲ್ಲ. ನಾವು ಸಾವಧಾನದಿಂದ ಇದ್ದೇವೆಂದರೆ ಅದು ಬಲಹೀನತೆಯಲ್ಲ, ಔದಾರ್ಯ, ಒಳ್ಳೆಯತನವೆಂದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಅವಿನಾಶ್, ಟಿ. ಶಿವಕುಮಾರ್, ಉಪಾಧ್ಯಕ್ಷ ಹಾಲೇಶ್, ದಯಾನಂದ್ ಬಿಲಾಲ್, ರಾಜು ಹಸನ್, ಶಾಬಾಜ್, ಮಂಜುನಾಥ್, ಅಮ್ಜದ್ ಅಲಿ, ಮಹಬೂಬ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!