ಕೂಡ್ಲಿಗಿ ವಿಜಯನಗರ ಜಿಲ್ಲೆಗೆ ಸೇರ್ಪಡೆ : ಸಂಭ್ರಮಾಚರಣೆ

ಕೂಡ್ಲಿಗಿ, ನ.27 – ನೂತನ ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲ್ಲೂಕು ಸೇರ್ಪಡೆ ಮಾಡಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತಿದ್ದಂತೆ ಇತ್ತ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಯುವಕರು, ಜನಪ್ರತಿನಿಧಿಗಳು, ಜನತೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. 

ಪಟ್ಟಣದ ಮದಕರಿನಾಯಕ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಯುವಕರು, ನೌಕರರು, ವ್ಯಾಪಾರಿಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾಮಾನ್ಯ ಜನತೆ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಈ ಸಂದರ್ಭದಲ್ಲಿ ಬಂಗಾರು ಹನುಮಂತು ಮಾತನಾಡಿ ಕೂಡ್ಲಿಗಿ ತಾಲ್ಲೂಕಿನಿಂದ ಹೊಸಪೇಟೆ ಕೇವಲ 43 ಕಿ.ಮೀ. ದೂರವಷ್ಟೇ ಇದ್ದು ರಾಷ್ಟ್ರೀಯ ಹೆದ್ದಾರಿ ಎರಡೂ ಪಟ್ಟಣಗಳಿಗೆ ಹೊಂದಿಕೊಂಡಂತೆ ಇರುವುದರಿಂದ ಗಂಟೆಯೊಳಗೆ ಜನತೆ ಜಿಲ್ಲಾ ಕೇಂದ್ರವನ್ನು ತಲುಪಿ ತಮ್ಮ ಕೆಲಸ ಮುಗಿಸಿಕೊಂಡು ಸಂಜೆಯೊಳಗೆ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ವರ್ಗಗಳ ಜನತೆಗೆ ವಿಜಯ ನಗರ ಜಿಲ್ಲೆ ಆಗಿರುವುದರಿಂದ ಸಂತಸವಾಗಿದೆ, ಕೂಡ್ಲಿಗಿ ಸೇರ್ಪಡೆಗೆ ತಾಲ್ಲೂಕಿನಲ್ಲಿ ಪಕ್ಷಭೇಧ ಮರೆತು ಹೋರಾಟವಾಗಿದ್ದು ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆನಂದ್ ಸಿಂಗ್, ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಸ್ಪಂದಿಸಿದ್ದರ  ಫಲವಾಗಿ ಇಂದು ಕೂಡ್ಲಿಗಿ ವಿಜಯನಗರ ಜಿಲ್ಲೆಗೆ ಸೇರಿದೆ ಎಂದರು.

ಕೂಡ್ಲಿಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ ಮಾತನಾಡಿ, ಕೂಡ್ಲಿಗಿ ತಾಲ್ಲೂಕು ವಿಜಯನಗರ ಜಿಲ್ಲೆಗೆ ಸೇರಿಸುವ ಮೂಲಕ ರಾಜ್ಯ ಸಚಿವ ಸಂಪುಟ ಉತ್ತಮ ನಿರ್ಧಾರ ಕೈಗೊಂಡಿದೆ. ಈ ಭಾಗದ ಜನತೆಯ ಬಹುದಿನಗಳ ಕನಸು ನನಸಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಕೆ.ಎಚ್.ವೀರನಗೌಡ, ಮುಖಂಡ ಸೂರ್ಯಪಾಪಣ್ಣ, ಮಂಜುನಾಥ ನಾಯಕ, ರಾಘವೇಂದ್ರ, ಸೊಲ್ಲೇಶ್, ಸುರೇಶ್ ಕುಮಾರ್, ಪಿ.ಚಂದ್ರು, ಎಲ್.ಪವಿತ್ರಾ, ವಿವೇಕಾನಂದಸ್ವಾಮಿ, ಪ್ರಾಂಶುಪಾಲರಾದ ಕುಲಕರ್ಣಿ, ಮೈದಾನ ಗೆಳೆಯರ ಬಳಗದ ನಾಗರಾಜ, ಪ್ರಾಂಶುಪಾಲರಾದ ಅರವಿಂದ ಕುಲಕರ್ಣಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಚನ್ನಪ್ಪ ಮತ್ತಿತರರು  ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. 

error: Content is protected !!