ಹರಿಹರದಲ್ಲಿ ಗೃಹ ರಕ್ಷಕ ದಳದಿಂದ ಕೋವಿಡ್‌ ಜಾಗೃತಿ, ಪಥ ಸಂಚಲನ

ಹರಿಹರ, ನ.7- ನಗರದ ಗೃಹ ರಕ್ಷಕ ದಳದ ಹರಿಹರ ಘಟಕದ ವತಿಯಿಂದ ಕೋವಿಡ್-19  ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ನಗರ ಠಾಣೆಯ ಎಎಸ್ಐ ಅಂತೋನಿ ಚಾಲನೆ ನೀಡಿದರು.

 ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ಹಾಗೂ ಕೋವಿಡ್-19 ರೋಗವು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಮಾಸ್ಕನ್ನು ಧರಿಸಿ ಜೀವ ಉಳಿಸಿಕೊಳ್ಳಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಘೋಷಣೆ ಕೂಗುತ್ತಾ ಸಂಚರಿಸಲಾಯಿತು. 

ಈ ವೇಳೆ ಮಾಸ್ಕ್ ಧರಿಸದೇ ಇರುವವರಿಗೆ ಮಾಸ್ಕ್ ವಿತರಿಸುವ ಮೂಲಕ ನಗರದಲ್ಲಿ  ಜಾಗೃತಿಯನ್ನು ಮೂಡಿಸಿದರು. ಜಾಗೃತಿ ಜಾಥಾ ನಗರ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಮುಖ್ಯ ಸರ್ಕಲ್, ಶೋಭಾ ಟಾಕೀಸ್ ವೃತ್ತ ನಂತರ ಚನ್ನಮ್ಮ ಸರ್ಕಲ್ ಶಿವಮೊಗ್ಗ ರಸ್ತೆ ಮುಖಾಂತರ ತರಕಾರಿ ಮಾರುಕಟ್ಟೆ ಜನಸಂದಣಿಯ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಪಥಸಂಚಲನವು  ಗೃಹರಕ್ಷಕ ದಳ ಕಚೇರಿಗೆ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳ ಸದಸ್ಯರಾದ ಗುರುನಾಥ್,  ಎಸ್.ಕೇಶವ, ಕೆ.ಎಚ್. ಪ್ರಕಾಶ್,  ಗಣೇಶ್, ಪಿ ಲೋಹಿತ್,  ಕಾಶಿನಾಥ್, ಎ.ಹೆಚ್. ರಾಧ, ಎ.ಹೆಚ್. ಮಂಜುಳ, ಸಾವಿತ್ರಮ್ಮ ಮತ್ತಿತರರು  ಭಾಗವಹಿಸಿದ್ದರು.

error: Content is protected !!