ದಾವಣಗೆರೆ, ನ.3- ಅಕ್ರಮವಾಗಿ ಎಂ ಸ್ಯಾಂಡ್ ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ವರದಿಗೆಂದು ನಿನ್ನೆ ತೆರಳಿದ್ದ ವೇಳೆ ಸುದ್ದಿ ವಾಹಿನಿಯೊಂದರ ಕ್ಯಾಮರಾಮನ್ ಮೇಲಿನ ಹಲ್ಲೆ ಖಂಡಿಸಿ ನಗರದಲ್ಲಿ ಇಂದು ಸುದ್ದಿ ಮಾಧ್ಯಮದ ಮಿತ್ರರು ಪ್ರತಿಭಟನೆ ನಡೆಸಿದರು.
ಉಪವಿಭಾಗಾಧಿಕಾರಿ ಕಚೇರಿ ಬಳಿ ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷ ಕೆ. ಏಕಾಂತಪ್ಪ, ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ನೇತೃತ್ವದಲ್ಲಿ ಪ್ರತಿಭಟಿಸಿ ನಂತರ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರ ಮುಖಾಂತರ ದೌರ್ಜನ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಜಿ.ಎಂ.ಆರ್. ಆರಾಧ್ಯ, ನಗರದ ಬೈಪಾಸ್ ರಸ್ತೆಯ ಪಕ್ಕದ ಜಾಗವೊಂದರಲ್ಲಿ ಎಂ ಸ್ಯಾಂಡ್ ದಾಸ್ತಾನು ಮಾಡಿಟ್ಟಿದ್ದ ಬಗ್ಗೆ ವೀಡಿಯೋ ಚಿತ್ರೀಕರಣ ಮಾಡಲು ಹೋಗಿದ್ದ ಸುದ್ದಿ ವಾಹಿನಿ ಕ್ಯಾಮೆರಾಮನ್ ಕಿರಣ್ ಕುಮಾರ್ ಮೇಲೆ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಕ್ಯಾಮೆರಾಮನ್ ಕಿರಣ್ ಕುಮಾರ್, ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ಕಾಡಜ್ಜಿ, ಕಾರ್ಯದರ್ಶಿಗಳಾದ ಪಿ.ಎಸ್. ಲೋಕೇಶ, ಈ. ಪವನಕುಮಾರ, ಕೂಟದ ಮಾಜಿ ಅಧ್ಯಕ್ಷ ಬಸವರಾಜ ದೊಡ್ಮನಿ, ತಾರಾನಾಥ, ನಾಗರಾಜ ಎಸ್.ಬಡದಾಳ್, ಡಿ. ರಂಗನಾಥ ರಾವ್, ಯೋಗರಾಜ, ಬಸವರಾಜ ನವಣಿ, ವಿನಾಯಕ ಪೂಜಾರ, ಎ. ಫಕೃದ್ದೀನ್, ಸತೀಶ ಬಡಿಗೇರ್, ನಿಂಗಪ್ಪ, ಎಸ್.ಎಸ್. ಸಾಗರ್, ಪರಮೇಶ್ ಕುಂದೂರು, ರಾಮಪ್ಪ, ಭುವನೇಶ್ವರಿ ಆರ್. ರವಿಕುಮಾರ, ರಮೇಶ, ರಾಮ ಪ್ರಸಾದ, ಚಂದ್ರಣ್ಣ, ಸತೀಶ ಸೇರಿದಂತೆ ಇತರರು ಭಾಗವಹಿಸಿದ್ದರು.