ದಾವಣಗೆರೆ, ನ.3- ಕನ್ನಡಪರ ಸಂಘಟನೆಗಳಲ್ಲಿ ಎಷ್ಟೇ ಬಣಗಳಿದ್ದರೂ ಕನ್ನಡದ ನಾಡು-ನುಡಿ, ನೆಲ-ಜಲ ವಿಚಾರಗಳಿಗೆ ಧಕ್ಕೆ ಬಂದರೆ ಯಾವುದೇ ಹೋರಾಟಕ್ಕೂ ನಮ್ಮ ಸಂಘಟನೆ ಸದಾ ಸಿದ್ಧವಿದೆ ಎಂದು ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಟಾರ್ಗೆಟ್ ಅಸ್ಲಾಂ ತಿಳಿಸಿದರು.
ಸ್ಥಳೀಯ ಕೆಟಿಜೆ ನಗರದದಲ್ಲಿ 65ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಣ ನೆರವೇರಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕೋವಿಡ್‍ನಿಂದ ಜನಜೀವನ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಯಾಕೂಬ್ ಕೊಟ್ಟೂರ್, ಕನ್ನಡ ಚಳುವಳಿ ಹೋರಾಟಗಾರ ನಾಗೇಂದ್ರ ಬಂಡಿಕರ್, ಅಬ್ದುಲ್ ಜಬ್ಬಾರ್, ಸುಬೋಧ್ ಬಂಡಿಕರ್, ಬಿ.ಕೆ. ಅತಾವುಲ್ಲಾ ಷರೀಫ್ (ಮದನಿ), ನಜೀರ್ ಸಾಬ್, ತಿಪ್ಪೇಶ್, ಪ್ರವೀಣ್ ಎಬಿಸಿ, ನೂರುಲ್ಲಾ, ಸೂರಜ್ ಗ್ಯಾರೇಜ್, ಷರೀಫ್ ಉಪಸ್ಥಿತರಿದ್ದರು.