ದಾವಣಗೆರೆ, ನ.3- ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಏಕತೆ ದಿನ-2020 ಮತ್ತು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ವಿವಿಯ ರಿಜಿಸ್ಟ್ರಾರ್ ಡಾ.ಬಸವರಾಜ ಬಣಕಾರ್ ಅವರು, ಶ್ರೀ ವಾಲ್ಮೀಕಿ ಮತ್ತು ಶ್ರೀ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಮೌಲ್ಯಗಳನ್ನು ಪ್ರಸ್ತುತ ಪಡಿಸಿದರು ಮತ್ತು ಈ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ಪ್ರಸ್ತುತ ಪೀಳಿಗೆಯಲ್ಲಿ ಹೇಗೆ ಉಪಯುಕ್ತವಾಗಿವೆ ಎಂಬುದರ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ವಿವಿಯ ಡೀನ್ ಪ್ರೊ.ರಂಗಪ್ಪ ಮತ್ತು ಪ್ರೊ.ವಿಶ್ವನಾಥ್ ಅವರೂ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡೀನ್ ಪ್ರೊ.ವಿ.ಕುಮಾರ್ ಮತ್ತು ಪ್ರೊ.ಲಕ್ಷ್ಮಣ್, ಪ್ರೊ.ಗೋವಿಂದಪ್ಪ, ಡಾ.ಶಶಿಧರ್, ಡಾ.ಮಲ್ಲಿಕಾರ್ಜುನ್, ಕುಮಾರ್ ಸಿದ್ದಮಲ್ಲಪ್ಪ ಹಾಗೂ ಇತರೆ ಬೋಧಕ ಮತ್ತು ಬೋಧಕೇತರ ಮತ್ತು ಏಜೆನ್ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.