ಮಲೇಬೆನ್ನೂರಿನಲ್ಲಿ 7 ಪಾಸಿಟಿವ್ : ನೀರಾವರಿ ಇಲಾಖೆ ಸೀಲ್‌ಡೌನ್

ಮಲೇಬೆನ್ನೂರು, ಜು.29- ಪಟ್ಟಣದಲ್ಲಿ ಬುಧವಾರ 7 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಭದ್ರಾ ನಾಲಾ ನಂ-3 ಉಪವಿಭಾಗ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಇಲ್ಲಿನ ನೀರಾವರಿ ಇಲಾಖೆಯ 52 ವರ್ಷದ ಎಇಇ ಅವರಿಗೆ ಸೋಂಕು ತಗುಲಿದೆ. ಇವರ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಬಸವೇಶ್ವರ ಬಡಾವಣೆಯ 13ನೇ ವಾರ್ಡ್‌ನಲ್ಲಿ ಸಿದ್ದಿಕಿ ಮಸೀದಿ ಬಳಿ ಒಂದೇ ಮನೆಯ ನಾಲ್ವರಿಗೆ ಮತ್ತು ಚಂದ್ರಗುತ್ತ್ಯೆಮ್ಮ ದೇವಸ್ಥಾನದ ಹತ್ತಿರದ ಮನೆಯ 58 ವರ್ಷದ ಮಹಿಳೆ ಹಾಗೂ 1ನೇ ವಾರ್ಡ್‌ನ ದರ್ಗಾ ರಸ್ತೆಯಲ್ಲಿ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಎಲ್ಲರನ್ನು ಗುತ್ತೂರಿನ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಯಿತು.

ರಾಪಿಡ್ ಟೆಸ್ಟ್ : ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್ ಆರ್.ರವಿ, ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ, ಕಂದಾಯ ನಿರೀಕ್ಷಕ ಸಮೀರ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್ ನವೀನ್ ಅವರುಗಳು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಮನೆ ಮನೆಗೆ ತೆರಳಿ, 60 ವರ್ಷದ ಮೇಲ್ಪಟ್ಟವರನ್ನು ಮತ್ತು ಅನಾರೋಗ್ಯದಿಂದ ಇರುವವರಿಗೆ ರಾಪಿಡ್ ಆಂಟಿಜಿನ್ ಟೆಸ್ಟ್ ಮಾಡಿಸಿದರು.

error: Content is protected !!