ಬಡ ಮಕ್ಕಳು ಪೇಪರ್ ಹಂಚುತ್ತಾರೆ
ಶಾಲೆಗೆ ತಪ್ಪದೇ ಹೋಗುತ್ತಾರೆ
ಗಳಿಕೆಯಲ್ಲಿ ಸ್ವಲ್ಪ ಉಳಿಸುತ್ತಾರೆ
ಬೇಕಾದ ಪುಸ್ತಕ ಕೊಳ್ಳುತ್ತಾರೆ
ಬೆಳಗಿನ ಜಾವ 5 ರಿಂದ
8 ರವರೆಗೆ ಇವರ ಕಾಯಕ
50 – 100 ಪತ್ರಿಕೆ ಹಂಚುತ್ತಾರೆ
ಮಹಡಿಗೆ ಪೇಪರ್ ಎಸೆಯುತ್ತಾರೆ
ದೊಡ್ಡ ಪತ್ರಿಕೆಗಳ ಮಾಲೀಕರು
ಸಂಪಾದಕರು ಇವರಿಗೆ ಸಹಾಯ ಮಾಡಿರಿ
ಇವರ ಓದಿಗೆ ದಾರಿದೀಪವಾಗಿರಿ
ಇವರೆಲ್ಲ ಬಡ ತಂದೆ-ತಾಯಿ ಮಕ್ಕಳು
ಛಳಿ, ಮಳೆ, ಗಾಳಿಗೆ ಹೆದರುವುದಿಲ್ಲ
ಸೈಕಲ್ ರಿಪೇರಿಗೆ ದುಡ್ಡು ಬೇಕು
ಶಾಲೆಯ ಪುಸ್ತಕ, ಫೀಜಿಗೆ ದುಡ್ಡು ಬೇಕು
ರಾಜ್ಯ ಮಟ್ಟದ ಪತ್ರಿಕೆಗಳು ಸಹಾಯ ಮಾಡಬೇಕು
ಪೇಪರ್ ಹಂಚುವ ಮಕ್ಕಳಿಗೆ ಸೈಕಲ್ ಕೊಡಿಸಿ
ಸಮವಸ್ತ್ರ, ಟೋಪಿ, ಸ್ವೆಟ್ಟರ್ ಕೊಡಿಸಿ
ಪೇಪರ್ ರಕ್ಷಣೆಗೆ ಪ್ಲಾಸ್ಟಿಕ್ ಚೀಲ ಕೊಡಿಸಿ
ಇವರ ಸೇವೆಗೆ ಬೆಲೆ ಕಟ್ಟಲಾಗದು.
ಕೆ.ಎನ್. ಸ್ವಾಮಿ
ಶ್ರೀ ಸಿದ್ಧಗಂಗಾ ಬಡಮಕ್ಕಳ ಲೋಕ, ದಾವಣಗೆರೆ.