ಹಳೇ ಕಂದಾಯ ಪರಿಗಣನೆಗಾಗಿ ವಿಪಕ್ಷ ಸದಸ್ಯರ ಮೌನ ಪ್ರತಿಭಟನೆ

ದಾವಣಗೆರೆ ಮಹಾನಗರ ಪಾಲಿಕೆಯ ಹಿಂದಿನ ಕಂದಾಯವನ್ನೇ ಪರಿಗಣಿಸಲು ಒತ್ತಾಯಿಸಿ ಪಾಲಿಕೆ ಕಾಂಗ್ರೆಸ್ ಸದಸ್ಯರು ಪಾಲಿಕೆಯ ಆವರಣದ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ದಾವಣಗೆರೆ, ಮೇ 29- ನಗರ ಪಾಲಿಕೆಯ ಕಂದಾಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಕಂದಾಯವನ್ನೇ ಪರಿಗಣಿಸಲು ಒತ್ತಾಯಿಸಿ ನಗರದಲ್ಲಿ ಇಂದು ಪಾಲಿಕೆ ವಿಪಕ್ಷದ ಕಾಂಗ್ರೆಸ್ ಸದಸ್ಯರು ವಿಪಕ್ಷ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಜಮಾಯಿಸಿದ್ದ ಸದಸ್ಯರು, ಮೌನ ಪ್ರತಿಭಟನೆ ನಡೆಸಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರಿಗೆ ಮನವಿ ಸಲ್ಲಿಸಿದರು.

ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳ ಕಾಲ  ಯಾವುದೇ ವ್ಯಾಪಾರ – ವಹಿವಾಟು ನಡೆಯದೇ ಸ್ತಬ್ದಗೊಂಡಿತ್ತು. ಈ ವೇಳೆ ಜನ ಲಾಕ್‍ಡೌನ್, ಜನತಾ ಕರ್ಪ್ಯೂ ಇವುಗಳಿಗೆ ಸಿಲುಕಿ ನಲುಗಿ ಹೋಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಜಿಲ್ಲಾಧಿಕಾರಿಗಳು ನಗರ ಪಾಲಿಕೆ ಆಡಳಿತಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮಾಡಿದ್ದ ನಿರ್ಣಯದಿಂದ ನಗರದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿಪಕ್ಷ ಸದಸ್ಯರು ಅಸಮಾಧಾನ ಗೊಂಡರು. ನಗರ ಪಾಲಿಕೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕಂದಾಯ ಪರಿಷ್ಕರಣೆಯನ್ನು ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ, ಚರ್ಚಿಸಿ, ಜನ ಸಾಮನ್ಯರಿಗೆ ಹೊರೆಯಾಗದಂತೆ ಹಾಗೂ ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗು ತ್ತಿತ್ತು. ಆದರೆ, ಇದೀಗ ಚುನಾಯಿತ ಸದಸ್ಯರನ್ನು  ಕಡೆಗಣಿಸಿ ಜಿಲ್ಲಾಧಿಕಾರಿಗಳು ಅವೈಜ್ಞಾನಿಕ ವಾಗಿ ಕಂದಾಯ ಪರಿಷ್ಕರಿಸಿ, ಜ.19, 2020ಕ್ಕೆ ತೀರ್ಮಾನಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಇದಕ್ಕೆ ಸರ್ಕಾ ರದ ಮಟ್ಟದಲ್ಲಿ ಅನುಮೋದನೆಯೂ ಸಹ ದೊರೆತಿದೆ. ಏಕಾಏಕಿ ಶೇ.18ರಷ್ಟು ವಸತಿಗೆ ಹಾಗೂ ಶೇ. 24ರಷ್ಟು ವಾಣಿಜ್ಯ ಮಳಿಗೆಗಳಿಗೆ ಕಂದಾಯ ದರ ಏರಿಕೆ ಮಾಡಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ಪಾಲಿಕೆ ಸದಸ್ಯರುಗಳಾದ ದೇವರ ಮನೆ ಶಿವಕುಮಾರ್, ಜಿ.ಎಸ್. ಮಂಜುನಾಥ್, ಜೆ.ಎನ್. ಶ್ರೀನಿವಾಸ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಜಿ.ಡಿ. ಪ್ರಕಾಶ್, ಜಾಕೀರ್ ಅಲಿ, ಮೊಹ್ಮದ್ ಕಬೀರ್ ಅಲಿ, ಸೈಯದ್ ಚಾರ್ಲಿ, ಕಲ್ಲಳ್ಳಿ ನಾಗರಾಜ್, ಉದಯ್ ಕುಮಾರ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಶಿವಲೀಲ ಕೊಟ್ರಯ್ಯ, ಸವಿತಾ ಗಣೇಶ್ ಹುಲ್ಮನಿ, ಶ್ವೇತ ಶ್ರೀನಿವಾಸ್, ನಾಗರ ತ್ನಮ್ಮ ಕೃಷ್ಣಪ್ಪ, ಎ.ಬಿ. ರಹೀಂ, ಚಮನ್ ಸಾಬ್, ಮುಖಂಡರುಗಳಾದ ಎಸ್. ಮಲ್ಲಿಕಾರ್ಜುನ್, ಸೋಮ್ಲಾಪುರದ ಹನುಮಂತಪ್ಪ, ಹರೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಗೆ ಮನವಿ: ಹಿಂದಿನ ಕಂದಾಯವನ್ನೇ ಮುಂದುವರಿಸುವಂತೆ ಸರ್ಕಾ ರಕ್ಕೆ ಪತ್ರ ಬರೆಯುವಂತೆ ನಗರ ಪಾಲಿಕೆ ವಿಪಕ್ಷ ಕಾಂಗ್ರೆಸ್ ಸದಸ್ಯರುಗಳು  ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಇದು ಸರ್ಕಾರದ ಮಟ್ಟದಲ್ಲಿ ಆಗ ಬೇಕಾಗಿರುವುದರಿಂದ ತಾವು ಸರ್ಕಾರದ ಗಮನಕ್ಕೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ,  ಹುಲ್ಮನಿ ಗಣೇಶ್ ಸೇರಿದಂತೆ ಇತರರು ಇದ್ದರು.

error: Content is protected !!