ಪಂಚಮಸಾಲಿಗೆ 2ಎ ಮೀಸಲಾತಿಗೆ ಒತ್ತಾಯ

ಹರಪನಹಳ್ಳಿಯಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಮನವಿ

ಹರಪನಹಳ್ಳಿ, ನ.7- ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರವು 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರವು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ತಾಲ್ಲೂಕು ಯುವ ಘಟಕದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಕೀಲರಾದ ಆರುಂಡಿ ನಾಗರಾಜ ಮಾತನಾಡಿ, ರಾಜ್ಯ ಸರ್ಕಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಈ ಸಮುದಾಯ ವನ್ನು ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿ ಸಬೇಕು ಎಂದು  ಸರ್ಕಾರವನ್ನು ಒತ್ತಾಯಿಸಿದರು. ಮುಖಂಡ ಶಶಿಧರ ಪೂಜಾರ ಮಾತನಾಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ದಿವಾಕರ, ಟಿಎಪಿಸಿಎಂಎಸ್ ನಿರ್ದೇಶಕ ಡಿ.ಜಿ.ಪ್ರಕಾಶ್‍ ಗೌಡ, ಮುಖಂಡರಾದ ಕೊಟ್ರೇಶ್, ಬಾಗಳಿ ಕೊಟ್ರೇಶಪ್ಪ, ನೀಲಗುಂದ ಸಿದ್ದಲಿಂಗಪ್ಪ, ಕಾಶಿನಾಥ, ಕೊಟ್ರೇಶ್, ತಲುವಾಗಲು ಚನ್ನನಗೌಡ, ಕೆ.ವಿರುಪಾಕ್ಷಪ್ಪ, ಎನ್.ಮಂಜುನಾಥ, ಚಂದ್ರಪ್ಪ ಗಾಂಧಿ, ಜಿಲ್ಲಾ ಘಟಕದ ಮುಲಾಲಿ ಬಸವರಾಜ, ತಾಲ್ಲೂಕು ಯುವ ಘಟಕದ ರವಿ ಅಧಿಕಾರ, ಮಹೇಶ್‍ಪೂಜಾರ, ಅಡವಿಹಳ್ಳಿ ಮಂಜುನಾಥ, ಬೇಲೂರು ಸಿದ್ದೇಶ್, ಸುರೇಶ್ ಶ್ಯಾನಭೋಗರ, ವೀರೇಶ್ ಇಟ್ಟಿಗಿ, ಹೆಚ್.ಅಶೋಕ, ಪೂಜಾರ ರಾಜು, ಸಣ್ಣ ನಿಂಗನಗೌಡ, ಪರಮೇಶ್ವರ, ಪ್ರಕಾಶ್, ಶ್ರೀಶೈಲಾ, ಕರಿಬಸಪ್ಪ, ಬಸವರಾಜ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.

error: Content is protected !!