ಹೊನ್ನಾಳಿ, ಫೆ.26- ಶಿವರಾತ್ರಿ ಅಂಗವಾಗಿ ಹಿರೇಕಲ್ಮಠದ ತೂಗುಯ್ಯಾಲೆ ಎದುರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅಧ್ಯಾತ್ಮಿಕ ಚಿತ್ರ ಪ್ರದರ್ಶನ, ದ್ವಾದಶ ಜ್ಯೋತಿರ್ಲಿಂಗಗಳ ದರ್ಶನದ ಮೂಲಕ ಪರಮಾತ್ಮನ ಅವತರಿಣಿಕೆಯ ವಿಚಾರಗಳನ್ನು ಪರಿಚಯಿಸ ಲಾಯಿತು ಎಂದು ಈಶ್ವರೀಯ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಜ್ಯೋತಿ ತಿಳಿಸಿದ್ದಾರೆ.
ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯ ದಲ್ಲಿ ನಿನ್ನೆ ಸಂಜೆ 89ನೇ ಶಿವರಾತ್ರಿ ಅಂಗವಾಗಿ ಶಿವ ಧ್ವಜಾರೋಹಣವನ್ನು ಜ್ಯೋತಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಆರುಂಡಿ ರುದ್ರೇಶ್, ಬಿದರ ಗಡ್ಡೆ ಬಸವರಾಜಪ್ಪ, ಹೊನ್ನಾಳಿ ಚಂದ್ರಶೇಖರ್, ಅನ್ನಪೂರ್ಣಮ್ಮ, ಶಾರದಮ್ಮ ಮಠದ ರುದ್ರಮ್ಮ ಇನ್ನಿತರರಿದ್ದರು.