ಮಿಟ್ಲಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಸಂವಾದ

ಮಿಟ್ಲಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಸಂವಾದ

ದಾವಣಗೆರೆ, ಫೆ.26- ಇನ್ನರ್‌ವ್ಹೀಲ್ ಕ್ಲಬ್ ದಾವಣಗೆರೆ ವತಿಯಿಂದ ಮಿಟ್ಲಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಸಂವಾದವನ್ನು ಏರ್ಪಡಿಸಲಾಗಿತ್ತು.

ಚಿಗಟೇರಿ ಆಸ್ಪತ್ರೆಯ ಶಿಶುವೈದ್ಯೆ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿರುವ ಡಾ. ಡಿ.ಆರ್.ಚೈತಾಲಿ ಅವರು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಪೋಷಣೆಯ ಕುರಿತು ಶಾಲಾ ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಐಎಂಎಯ ಮಹಿಳಾ ವೈದ್ಯರ ವಿಭಾಗದ ಅಧ್ಯಕ್ಷೆ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರೊ. ಡಾ.ರಜನಿ ಅವರು ಹೆಣ್ಣು ಮಕ್ಕಳ ದಿನ ಹಾಗೂ ಭೇಟಿ ಬಜಾವೋ ಭೇಟಿ ಪಡಾವೋ ಕುರಿತು ಮಾತನಾಡಿದರು.

error: Content is protected !!