ದಾವಣಗೆರೆ, ಡಿ.11- ಇಲ್ಲಿಗೆ ಸಮೀಪದ ಎಲೆಬೇ ತೂರು ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಿಯ ಕಾರ್ತಿಕೋತ್ಸವವು ವಿಜೃಂಭ ಣೆಯಿಂದ ನಡೆಯಿತು.
ಸಂಜೆ ಶ್ರೀ ಮಾರಿಕಾಂಬ ದೇವಿಗೆ ಪುಷ್ಪಾರ್ಚನೆ ಮಾಡಿ ಮಹಾ ಮಂಗಳಾರತಿಯ ನಂತರ ಕಾರ್ತಿಕ ದೀಪ ಹಚ್ಚಲಾಯಿತು. ಶ್ರೀದೇವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಡಿಯಕ್ಕಿ, ಅರಿಶಿಣ-ಕುಂಕುಮ, ಬಾಳೆಹಣ್ಣು, ಕಾಯಿ, ಊದುಬತ್ತಿ ತಂದು ಅರ್ಪಿಸಿ, ಅಣತೆಗೆ ಎಣ್ಣೆ ಹಾಕಿ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಿದ್ದರು. ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಸ್ಥಾನವು ಬಾಳೆಕಂಬ ಮಾವಿನ ತೋರಣಗಳಿಂದ ಅಲಂಕಾರಗೊಂಡು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿತ್ತು.