ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ 2024-25 ನೇ ಸಾಲಿನ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮತ್ತು ಪ್ರಜಾವಾಣಿ ಹಿರಿಯ ಉಪಸಂಪಾದಕಿ ಹಾಗೂ ಕ್ಯಾನ್ಸರ್ ಸಮಾಲೋಚಕಿ ಕೃಷ್ಣಿ ಶಿರೂರ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಮಂಜಣ್ಣ ಅಧ್ಯಕ್ಷತೆ ವಹಿಸಲಿದ್ದು, ಪಾಲಿಕೆ ಸದಸ್ಯರಾದ ವೀಣಾ ನಂಜಪ್ಪ, ದಾವಣಗೆರೆ ವಿವಿಯ ಕೆ ಜಿ ಸಿ ಟಿ ಎ ಪ್ರಾದೇಶಿಕ ಕಾರ್ಯದರ್ಶಿ ಡಾ. ಟಿ. ಕರಿಬಸಪ್ಪ ಮತ್ತು ಕಾಲೇಜಿನ ಅಧೀಕ್ಷಕ ಟಿ. ಶೇಷಪ್ಪ ಉಪಸ್ಥಿತರಿರುವರು.