ನಗರದಲ್ಲಿ ಜೈನ ದಿಗಂಬರ ಮುನಿಗಳಿಗೆ ಭಕ್ತಿಯ ಸ್ವಾಗತ

ನಗರದಲ್ಲಿ ಜೈನ ದಿಗಂಬರ ಮುನಿಗಳಿಗೆ ಭಕ್ತಿಯ ಸ್ವಾಗತ

ದಾವಣಗೆರೆ, ನ.17- ಜೈನರ ಗುತ್ತಿಯಲ್ಲಿ ನಡೆಯುವ ಪಂಚ ಕಲ್ಯಾಣಕ ಪ್ರತಿಷ್ಠಾ ಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಜ್ಞದ ನಿಮಿತ್ತ ಮಹಾರಾಷ್ಟ್ರದಿಂದ ಶ್ರವಣಬೆಳಗೊಳಕ್ಕೆ ಹೊರಟ ಆಚಾರ್ಯ ಶ್ರೀ ವಿಶುದ್ಧ ಸಾಗರ ಮಹಾರಾಜರು ಸೇರಿ ದಂತೆ 15ಕ್ಕೂ ಅಧಿಕ ದಿಗಂಬರ ಜೈನ ಮುನಿಗಳನ್ನು ದಾವಣಗೆರೆ ಜೈನ ಸಮುದಾಯದ ಮುಖಂಡರು ಭಾನುವಾರ ಸಂಜೆ ಅರಳಿಮರ ವೃತ್ತದ ಬಳಿ ಶ್ರದ್ಧಾ ಭಕ್ತಿಯಿಂದ ಭರಮಾಡಿಕೊಂಡರು.

ಎನ್‌.ಆರ್‌ ರಸ್ತೆಯಲ್ಲಿನ ಪಾಶ್ವನಾಥ ಜೈನ ಮಂದಿರದಲ್ಲಿ ಮಹಾರಾಜರು ಸ್ವಾಮಿಯ ದರ್ಶನ ಪಡೆದು, ಭಕ್ತರಿಗೆ ಪ್ರವಚನ ನೀಡಿ ಹರಸಿದರು.

ಮಹಾರಾಷ್ಟ್ರದ ನಾಂದನಿಯಿಂದ ಯಾತ್ರೆ ಆರಂಭಿಸಿದ ಜೈನ ಮುನಿಗಳು ಹೂವಿನ ಹಡಗಲಿ, ಹರಪನಹಳ್ಳಿ ಮಾರ್ಗವಾಗಿ ದಾವಣಗೆರೆ ಆಗಮಿಸಿ, ನಗರದ ಹೊರ ವಲಯದ ಆವರಗೆರೆಯ ಸಿದ್ದಲಿಂಗೇಶ್ವರ ಶಾಲೆಯಲ್ಲಿ ವಸತಿ ಮಾಡಿದರು.

ಈ ವೇಳೆ ಜೈನ ಸಮಾಜದ ಮುಖಂಡರಾದ ಜಿತೇಂದ್ರ ಕುಮಾರ್‌, ಕೋಮಲ್‌, ಪ್ರಶಾಂತ್‌, ವಿರೇಂದ್ರ ಕುಮಾರ್‌, ರಾಜು, ಧರಣೇಂದ್ರ ಪ್ರಸಾದ್‌, ಮಂಜುನಾಥ್‌, ನವೀನ್‌, ಗುಣಪಾಲ್‌ ಸೇರಿದಂತೆ ಮತ್ತಿತರರಿದ್ದರು.

error: Content is protected !!