ದಾವಣಗೆರೆ, ಅ.22- ಹಿಮಾಚಲ ಪ್ರದೇಶದ ಉನಾದಲ್ಲಿ ಅ.22ರಿಂದ ನಡೆಯುವ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಕೆ.ವೈ ಸೃಷ್ಟಿ ಆಯ್ಕೆಯಾಗಿದ್ದಾರೆ.
ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗಾಚಾರ್ಯ ವೈದ್ಯ ತೀರ್ಥರಾಜ್ ಹೋಲೂರ್ ಹಾಗೂ ಸುಮ ಹೋಲೂರ್ ಈ ಟೂರ್ನಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದು, ಶಾಂಭವಿ ಅವರು ಬಾಲಕಿಯರ ತಂಡದ ವ್ಯವಸ್ಥಾಪಕಿಯಾಗಿದ್ದಾರೆ.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಪ್ರಕಾಶ್ ಉತ್ತಂಗಿ, ಪುಷ್ಪಾ ವಾಲಿ ಮತ್ತಿತರರು ಕ್ರೀಡಾಪಟು ಮತ್ತು ತಂಡಕ್ಕೆ ಶುಭ ಕೋರಿ ಬೀಳ್ಕೊಟ್ಟರು.