ಶಾಸಕ ಡಿ.ಜಿ. ಶಾಂತನಗೌಡ
ಹೊನ್ನಾಳಿ, ಅ. 6 – ಕುಂದೂರು ಆಂಜನೇಯ ಸ್ವಾಮಿಯ ಪವಾಡದಿಂದ ಈ ವರ್ಷ ಮಳೆ-ಬೆಳೆ ಸಮೃದ್ಧಿಯಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಕುಂದೂರು ಗ್ರಾಮದ ಮೇಜರ್ ಮುಜ ರಾಯಿ ಇಲಾಖೆಯ ವ್ಯಾಪ್ತಿಗೊ ಳಪಡುವ ಶ್ರೀ ಕ್ಷೇತ್ರ ಆಂಜ ನೇಯ ಸ್ವಾಮಿ ದೇವಾಲಯ ದಲ್ಲಿ ಹಮ್ಮಿಕೊಂಡಿದ್ದ ಅಖಂಡ 52ನೇ ವರ್ಷದ ಮೊದಲನೇ ದಿನದ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಇಲ್ಲಿ ನಡೆಯುವ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಸಾರ್ವಜನಿಕರು ಮೊಬೈಲ್ ಮತ್ತು ಧಾರಾವಾಹಿಗಳನ್ನು ನೋಡುತ್ತಾ, ಕಾಲಹರಣ ಮಾಡದೇ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಯುವ ಸಮೂಹವು ನಮ್ಮ ನಾಡು-ನುಡಿ-ಸಂಸ್ಕೃತಿಯನ್ನು ಉಳಿಸಿ, ಬೆಳೆಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಕೆ. ಶೇಖರಪ್ಪ ಮಾತನಾಡಿ, ಶ್ರೀ ಆಂಜನೇಯ ಸ್ವಾಮಿಯ ನೂತನ ತೇರು ನಿರ್ಮಾಣದ ಕಾಮಗಾರಿಯು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ತೇರು ಮನೆ ನಿರ್ಮಾಣಕ್ಕೆ 1 ಕೋಟಿ ರೂ.ಮತ್ತು ಸಮುದಾಯ ಭವನದ ನಿರ್ಮಾಣಕ್ಕೆ 1 ಕೋಟಿ ಒಟ್ಟು 3 ಕೋಟಿ.ರೂಗಳ ಹಣದ ಅವಶ್ಯಕತೆಯಿದೆ ಎಂದು ತಿಳಿಸಿದರು.
ಭದ್ರಾವತಿಯ ಚಿದಾ ನಂದ ಮತ್ತು ತಂಡದವರು ಮಧುರ ಗೀತಗಾಯನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ರಾಜಶೇಖರಪ್ಪ ಮುಖಂಡದ ಕೆ.ಎನ್.ಡಿ. ವೀರಣ್ಣಗೌಡ, ಕೆ.ಎನ್. ರಂಗನಾಥರಾವ್, ಬಿ. ಶಿವಪ್ಪ, ವಿಕ್ರಂ ಪಾಟೀಲ್, ಬಿ.ವಿ. ಬಸವರಾಜ, ಅನಿಲ್ ಕುಮಾರ್ ನಾಡಿಗ್, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ ಕರಿಬಸಪ್ಪ, ಸದಸ್ಯ ಎಸ್.ಧನಂಜಯ, ರಹಮತ್ ಉಲ್ಲಾ ಖಾನ್, ಸುರೇಶ್, ಸಿ. ಆಂಜನೇಯ, ಪ್ರಸನ್ನಕುಮಾರ್, ಭಾಗ್ಯಮ್ಮ ರೇವಣಸಿದ್ದಪ್ಪ, ಲತಾ ಹಾಲೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಎಂ.ಎಸ್. ರಾಜಶೇಖರ್ ನಿರೂಪಿಸಿ, ಕೆ.ಜಿ.ಆಂಜನೇಯ ಸ್ವಾಗತಿಸಿ, ಕೆ.ಎನ್.ಡಿ. ವೀರಣ್ಣಗೌಡ ವಂದಿಸಿದರು.