ಜಗಳೂರಿನಲ್ಲಿ ಇಂದು ವನ್ಯಜೀವಿ ಸಪ್ತಾಹ ಜಾಥಾ

ಜಗಳೂರು ಪ್ರಾದೇಶಿಕ ಅರಣ್ಯ ವಿಭಾಗ, ರಂಗಯ್ಯನ ದುರ್ಗ ಕೊಂಡಕುರಿ ಅಭಯಾರಣ್ಯ ವತಿಯಿಂದ  ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಮತ್ತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ತಿಳಿಸಿದ್ದಾರೆ. 

ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನದಿಂದ ಜಾಥಾ ಪ್ರಾರಂಭವಾಗಲಿದ್ದು,  ಶಾಸಕ ಬಿ.ದೇವೇಂದ್ರಪ್ಪ ಮತ್ತು ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶ ಆರ್.ಚೇತನ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ‌.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಾಲಾ –  ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜಾಥಾದಲ್ಲಿ ಕಲಾತಂಡ ಗಳಿಂದ ಡೊಳ್ಳು ಕುಣಿತ, ಗೊಂಬೆ ಕುಣಿತ, ಉರ್ಮಿ, ಕಹಾಳೆ, ಕಲಾ ತಂಡ ಗಳು ಭಾಗವಹಿಸಲಿವೆ. ಪಟ್ಟಣದ ಹೊರಕೆರೆ, ಭುವನೇಶ್ವರಿ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತಗಳ ಮೂಲಕ ಜಾಥಾ ಸಾಗಿ ನಂತರ ಎನ್‌ಎಂಕೆ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ವೇದಿಕೆಯಲ್ಲಿ ಡಾ.ರವಿಕುಮಾರ್, ವಕೀಲ, ಪತ್ರಕರ್ತ ಡಿ. ಶ್ರೀನಿವಾಸ್, ವನ್ಯಜೀವಿ ಜೈವಿಕ ತಜ್ಞ ಸಂಜಯ್ ಗುಬ್ಬಿ ಅವರನ್ನು ಸನ್ಮಾನಿಸಲಾಗುವುದು.

error: Content is protected !!