ಕದಳಿ ಮಹಿಳಾ ವೇದಿಕೆಯ 156ನೇ ಕದಳಿ ಕಮ್ಮಟ, ದತ್ತಿ ಉಪನ್ಯಾಸ ಕಾರ್ಯಕ್ರಮ

ಕದಳಿ ಮಹಿಳಾ ವೇದಿಕೆಯ 156ನೇ ಕದಳಿ ಕಮ್ಮಟ, ದತ್ತಿ ಉಪನ್ಯಾಸ ಕಾರ್ಯಕ್ರಮ

ದಾವಣಗೆರೆ, ಅ. 4- ಕದಳಿ ಮಹಿಳಾ ವೇದಿಕೆಯ 156ನೇ ಕದಳಿ ಕಮ್ಮಟ ದತ್ತಿ ಉಪನ್ಯಾಸ ಕಾರ್ಯಕ್ರಮ ನಗರದ ಶ್ರೀ ಮಂಜುನಾಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಚರಿಸಲಾಯಿತು.

ದಿ. ಬಿ.ಕೆ. ಸಿದ್ದಪ್ಪ ಅವರ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಮಂಜುನಾಥ, ಅಂಜಿನಪ್ಪ, ಕಾರ್ಯಕ್ರಮದ ದತ್ತಿ ಉಪನ್ಯಾಸಕರಾಗಿ ಸರ್ ಸಿ.ವಿ. ರಾಮನ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶಾಂತಲಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆ ರಾಜ್ಯ ಉಪ ಸಂಚಾಲಕಿ ಪ್ರಮೀಳಾ ನಟರಾಜ್, ವಿನೋದ ಅಜಗಣ್ಣನವರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ದಾವಣಗೆರೆ ತಾಲ್ಲೂಕು ಘಟಕದ ಅಧ್ಯಕ್ಷೆ ಮಮತಾ ನಾಗರಾಜ್ ಉಪಸ್ಥಿತರಿದ್ದರು.

ಸೌಮ್ಯ ಸತೀಶ್ ಸ್ವಾಗತಿಸಿದರು. ಉಪನ್ಯಾಸಕರ ಪರಿಚಯವನ್ನು ನಿರ್ಮಲ ಶಿವಕುಮಾರ್ ಹಾಗೂ ದತ್ತಿ ದಾನಿಗಳ ಪರಿಚಯವನ್ನು ಲಕ್ಷ್ಮಿ ಮಲ್ಲಿಕಾರ್ಜುನ್ ನಡೆಸಿಕೊಟ್ಟರು. ಗಾಯತ್ರಿ ವಸ್ತ್ರದ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ರತ್ನ ಸಿ. ರೆಡ್ಡಿ ವಂದಿಸಿದರು.

ವಾಣಿರಾಜ್‌ ಕಾರ್ಯಕ್ರಮ ನಿರೂಪಿಸಿದರು. ವಿಜಯ ಚಂದ್ರಶೇಖರ್, ಪೂರ್ಣಿಮಾ ಪ್ರಸನ್ನ, ಕಾಲೇಜಿನ ಸಿಬ್ಬಂದಿ ವರ್ಗದವರು, ಶಿಕ್ಷಕರು, ಮಕ್ಕಳು, ಕದಳಿ ಮಹಿಳಾ ವೇದಿಕೆಯ ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಕಾರ್ಯದರ್ಶಿ  ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ.

error: Content is protected !!