ನಗರದಲ್ಲಿ ಅ.6ಕ್ಕೆ ಬಹುಭಾಷಾ ಕವಿಗೋಷ್ಠಿ

ದಾವಣಗೆರೆ, ಸೆ. 26- ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಪಿ.ಜೆ ಬಡಾವಣೆಯ ವನಿತಾ ಸಮಾಜದಲ್ಲಿ ಅ.6ರ ಭಾನುವಾರ ಬೆಳಗ್ಗೆ 10.30ಕ್ಕೆ ದಸರಾ ಹಬ್ಬದ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.

ಕವಿಗೋಷ್ಠಿಗೆ ಹೆಸರು ನೋಂದಾಯಿಸಲು ಅ.1 ಕೊನೆ ದಿನವಾಗಿದ್ದು, ಆಸಕ್ತ ಕವಿಗಳು ಯಾವುದೇ ಭಾಷೆಯ ಒಂದು ಕವಿತೆಯನ್ನು ವಾಚಿಸಲು ಅವಕಾಶವಿದೆ. 

ಮೊದಲು ಹೆಸರು ನೋಂದಾಯಿಸಿದ 30 ಕವಿಗಳಿಗೆ ಮಾತ್ರ ಅವಕಾಶ. ಹೆಸರು ನೋಂದಾಯಿಸಲು 7019353970, 9916277224, 9611969690, 97432 18549 ಸಂಪರ್ಕಿಸಿ.

error: Content is protected !!