ಹಮಾಲಿ ಬಂದ್‌ಗೆ ಹಮಾಲರ ಎಚ್ಚರಿಕೆ

ರಾಣೇಬೆನ್ನೂರು,ಸೆ.20-  ಇಲ್ಲಿನ ಎಪಿಎಂಸಿಯಲ್ಲಿ ಅರ್ಧ ಶತಮಾನದಿಂದ ಹಮಾಲಿ ಮಾಡುತ್ತಿದ್ದೇವೆ ನಮಗೆ ಇದುವರೆಗೂ ಯಾವುದೇ ವಸತಿ ಸೌಲಭ್ಯ ಇರುವುದಿಲ್ಲ. ಕೂಡಲೇ ನಮಗೆ ವಸತಿ ಸೌಲಭ್ಯ ಒದಗಿಸುವಂತೆ   ಚೌಡೇಶ್ವರಿ ಹಮಾಲರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ ಅವರು ಎಪಿಎಂಸಿ ಕಾರ್ಯದರ್ಶಿ ಶೈಲಜಾ ಅವರಿಗೆ ಇಂದು ಮನವಿ ಸಲ್ಲಿಸಿದರು.

ಹೂಲಿಹಳ್ಳಿ-ಕೂನಬೇವು   ಮೆಗಾ ಮಾರು ಕಟ್ಟೆಯು ನಗರದಿಂದ ಸುಮಾರು 10 ಕಿಲೋಮೀಟರ್ ದೂರವಿದೆ. ಪ್ರತಿದಿನ ನಗರದಿಂದ ಅಲ್ಲಿಗೆ ತೆರಳಲು ಹಮಾಲರಿಗೆ ಬಹಳ ತೊಂದರೆಯಾಗುತ್ತದೆ. ನಾವು ಅನೇಕ ವರ್ಷಗಳಿಂದ ನಿವೇಶನಗಳಿಗೆ ಮನವಿ ಸಲ್ಲಿಸಿದರೂ ಸಹ  ಇಲಾಖೆ ನಮ್ಮನ್ನು ಸರ್ಕಾರ ಅಲಕ್ಷಿಸುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಮೆಗಾ ಮಾರುಕಟ್ಟೆಯಲ್ಲಿನ ಸರ್ವೆ ನಂಬರ್ 122, 123, 144 ಹಾಗೂ 145 ನಿವೇಶನಗಳಲ್ಲಿ ಹಮಾಲರಿಗೆ ಮನೆಗಳನ್ನು ನಿರ್ಮಾಣ ಮಾಡಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಮಾಲಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಪರಶುರಾಮ ಹೆಳವರ, ನಾಗಪ್ಪ ಚನ್ನಕೇರಿ, ಬಸವರಾಜ ಗಾಳಿ ಮತ್ತಿತರರಿದ್ದರು.

error: Content is protected !!