ಪರಿಸರ ಮಾರಕ ಪಾದಚಾರಿ

ಪರಿಸರ ಮಾರಕ ಪಾದಚಾರಿ

ಮಾನ್ಯರೇ, 

ದಾವಣಗೆರೆಯ ವಿದ್ಯಾನಗರದ ಕಾಫಿ ಡೇ ಮುಂಭಾಗದ ರಸ್ತೆಯ ಬದಿ ನಿರ್ಮಾಣವಾಗುತ್ತಿರುವ ಪಾದಚಾರಿ ರಸ್ತೆ ಕಾಮಗಾರಿ ಪರಿಸರಕ್ಕೆ ಮಾರಕವಾಗಿದೆ.

ಇಲ್ಲಿನ ರಸ್ತೆ ಬದಿಯ ಗಿಡ-ಮರಗಳ ಸುತ್ತಲೂ ನೀರು ಇಂಗಲು ಜಾಗ ಬಿಡದೆ, ಕಾಂಕ್ರೀಟ್‌ ಸುರಿದು ಮರಗಳಿಗೆ ಉಸಿರು ಕಟ್ಟಿಸುತ್ತಿದ್ದಾರೆ. ಈ ಕೃತ್ಯವು ಜಾಗತಿಕ ತಾಪಮಾನದ ಹೆಚ್ಚಳ ಹಾಗೂ ಮರ-ಗಿಡಗಳ ನಾಶಕ್ಕೆ ಕಾರಣವಾಗಲಿದೆ.

ಪ್ರತಿ ಮರ-ಗಿಡಗಳ ಸುತ್ತಲೂ ಕನಿಷ್ಟ 3ರಿಂದ 4 ಅಡಿ ಜಾಗ ಬಿಟ್ಟು ಇಂಗು ಗುಂಡಿ ನಿರ್ಮಿಸಿ, ಫಲವತ್ತಾದ ಮಣ್ಣು ಸುರಿದು ಸುತ್ತಲೂ ಕಟ್ಟೆ ಕಟ್ಟುವ ಕಾಮಗಾರಿ ಮಾಡಿದರೇ, ಪರಿಸರದ ಸ್ವಾಸ್ಥ್ಯ ಕಾಪಾಡಬಹುದು.

ಎಂಸಿಸಿ `ಬಿ’ ಬ್ಲಾಕ್‌ನಲ್ಲಿಯೂ ಇದೇ ರೀತಿಯ ಕಾಮಗಾರಿ ನಡೆಿದಿರುವುದು ವಿಪರ್ಯಾಸ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸಿ ಗಿಡ-ಮರ ಕಾಪಾಡುವ ಬಗ್ಗೆ ಗಮನ ಹರಿಸಬೇಕು.

– ಸುಧಾ, ಅನಿತಾ,  ವಕೀಲರು, ದೇವರಾಜು ಅರಸು ಬಡಾವಣೆ.

error: Content is protected !!