ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕಾರ್ಯ ಶಿಕ್ಷಕರಿಂದಾಗಲಿ : ವಿಜಯ್‌

ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಕಾರ್ಯ ಶಿಕ್ಷಕರಿಂದಾಗಲಿ : ವಿಜಯ್‌

ದಾವಣಗೆರೆ, ಸೆ.1- ಮಕ್ಕಳಲ್ಲಿನ ಆಂತರಿಕ ಪ್ರತಿಭೆ ಗುರುತಿಸುವ ಕಾರ್ಯ ಶಿಕ್ಷಕರಿಂದಾಗಲಿ ಎಂದು ರಾಮಕೃಷ್ಣ ಇಂಟರ್‌ ನ್ಯಾಷನಲ್‌ ಶಾಲೆಯ ಕಾರ್ಯದರ್ಶಿ ವಿಜಯ ಕುಮಾರ್‌ ತಿಳಿಸಿದರು.

ಇಲ್ಲಿನ ಚಿಂತಾಮಣಿ ನಗರದಲ್ಲಿನ ರಾಮಕೃಷ್ಣ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜನಹಳ್ಳಿ ಕ್ಲಸ್ಟರ್‌ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹರಿಹರದ ಇಸಿಓ ಹರೀಶ್‌, ಬಿಆರ್‌ಪಿ ವೀರಪ್ಪ, ಕೊಕ್ಕನೂರಿನ ಸಿಆರ್‌ಪಿ ಕೆ.ಎನ್‌. ಬಸವರಾಜಯ್ಯ, ಎನ್‌ಪಿಎಸ್‌ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣ, ರಾಜನಹಳ್ಳಿ ಸಿಆರ್‌ಪಿ ಕಟ್ಟೆ ಚನ್ನಕೇಶವ ಶ್ರೀಧರ, ಶಾಲಾ ಮುಖ್ಯ ಶಿಕ್ಷಕ ಉದಯ್‌ ಕುಮಾರ್‌ ಮತ್ತು ಇತರರು ಇದ್ದರು.

error: Content is protected !!