ಮಾನ್ಯರೇ,
ದಿನಾಂಕ 29.8.2024ರ `ಜನತಾವಾಣಿ’ಯಲ್ಲಿ `ಖಾಲಿ ಇರುವ ನಿವೇಶನ ಸ್ವಚ್ಛ ಗೊಳಿಸದಿದ್ದರೆ ದಂಡ’ ಎಂಬ ಸುದ್ದಿ ಪ್ರಕಟವಾಗಿತ್ತು. ಇಂತಹ ಸುದ್ದಿಗಳನ್ನು ಹಲವಾರು ವರ್ಷಗಳಿಂದ ಪತ್ರಿಕೆಯಲ್ಲಿ ಓದುತ್ತಾ ಬಂದಿದ್ದೇನೆ. ಆದರೆ ಖಾಲಿ ನಿವೇಶನದಲ್ಲಿ ಬೆಳೆದು ಪೊದೆಯಂತಾಗಿರುವ ಜಾಲಿ ಗಿಡ, ಮರಗಳನ್ನು ಸ್ವಚ್ಛ ಮಾಡಿಸಿದ್ದನ್ನು ನಾನು ಈವರೆಗೂ ನೋಡಿಲ್ಲ.
ಸಿದ್ದವೀರಪ್ಪ ಬಡಾವಣೆ 9ನೇ ಕ್ರಾಸ್ ನ್ಯಾಯ ಬೆಲೆ ಅಂಗಡಿಗಳ ಎದುರಿಗೆ ಖಾಲಿ ಸೈಟಿನಲ್ಲಿ ಆಳೆತ್ತರಕ್ಕೆ ಗಿಡಮರಗಳು ಬೆಳೆದಿವೆ. ಹಾಗೆಯೇ, 10ನೇ ಕ್ರಾಸ್ ನಲ್ಲಿಯೂ ಮರಗಿಡಗಳು ಬೆಳೆದಿವೆ. ಇದರಿಂದಾಗಿ ಡೆಂಗ್ಯೂ, ಚಿಕನ್ ಗುನ್ಯಾ, ವೈರಲ್ ಫಿವರ್, ಮಾರಕ ರೋಗಗಳು ಹಬ್ಬುವುದಕ್ಕೆ ಮೂಲ ಕಾರಣವಾಗಿದೆ. ಮಹಾನಗರ ಸಭೆಯ ಆಯುಕ್ತರು ನಮ್ಮ ಬಡಾವಣೆಯ ಸಂಬಂಧಪಟ್ಟ ಕಾರ್ಪೊರೇಟರ್‌ಗಳೊಂದಿಗೆ ಚರ್ಚಿಸಿ ಸ್ವಚ್ಛಗೊಳಿಸುವವನ್ನು ಅಭಿಯಾನ ಕೂಡಲೇ ಆರಂಭಿಸಬೇಕು.
– ರಘುನಾಥರಾವ್ ತಾಪ್ಸೆ, ನಿವೃತ್ತ ಬ್ಯಾಂಕ್ ಅಧಿಕಾರಿ, ದಾವಣಗೆರೆ.