ಶೀಘ್ರದಲ್ಲೇ ಹರಿಹರದಲ್ಲಿ ದೂಡಾ ಶಾಖಾ ಕಚೇರಿ ಆರಂಭ : ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ಶೀಘ್ರದಲ್ಲೇ ಹರಿಹರದಲ್ಲಿ ದೂಡಾ ಶಾಖಾ ಕಚೇರಿ ಆರಂಭ : ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ಹರಿಹರ, ಸೆ.1- ಇಲ್ಲಿನ ನಗರಸಭೆಯಲ್ಲಿ ಒಂದು ಕೊಠಡಿಯನ್ನು ನಿಗದಿ ಪಡಿಸಿದರೆ, ದಾವಣಗೆರೆ- ಹರಿಹರ ಪ್ರಾಧಿಕಾರದ ಶಾಖಾ ಕಚೇರಿಯನ್ನು ಒಂದು ತಿಂಗಳ ಒಳಗೆ ಆರಂಭಿಸಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದರು. 

ರಾಯಲ್ ರಾಕ್ ಇನ್  ಹೋಟೆಲ್ ಸಭಾಂಗಣದಲ್ಲಿ ಹರಿಹರ ನಗರದ ಕಾಂಗ್ರೆಸ್ ಮತ್ತು ಅಭಿಮಾನಿಗಳ ಬಳಗದ ವತಿಯಿಂದ ಇಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಾಧಿಕಾರದ ವ್ಯಾಪ್ತಿಗೆ ಹರಿಹರ ನಗರ ಸೇರುವುದರಿಂದ ಇಲ್ಲಿನ ಜನರ ಸಮಸ್ಯೆಗಳು ಏನೆಂಬುದನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದು, ಇಲ್ಲಿನ ಜನರ ಅನುಕೂಲದ ದೃಷ್ಟಿಯಿಂದ ಪ್ರಾಧಿಕಾರದ ಶಾಖಾ ಕಚೇರಿಯನ್ನು ಆರಂಭಿಸಿ, ಅದಕ್ಕೆ  ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.

 ಸ್ಥಳೀಯ ಜನರ ಕುಡಿಯುವ ನೀರಿನ ಶೇಖರಣಾ ಘಟಕದ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬಳಿ ಚರ್ಚೆ ನಡೆಸಲಾಗುತ್ತದೆ. ಜೊತೆಗೆ ಇಲ್ಲಿನ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 50 ಎಕರೆ ಜಮೀನನ್ನು ಖರೀದಿಸಿ ಸಿ.ಎ. ಸೈಟ್ ಮಾಡಿ, ಬಡವರಿಗೆ ಹಂಚಿಕೆ ಮಾಡುವಂತ ಆಲೋಚನೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅವುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು

ಮಾಜಿ ಶಾಸಕ ಎಸ್. ರಾಮಪ್ಪ, ನಂದಿಗಾವಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಎಂ‌ ನಾಗೇಂದ್ರಪ್ಪ ಮಾತನಾಡಿದರು.

ಕೆ.ಪಿ.ಸಿ.ಸಿ. ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ,  ಜನರು ಮನೆ ಕಟ್ಟುವುದಕ್ಕೆ ಲೈಸೆನ್ಸ್ ಮತ್ತು ಇತರೆ ದಾಖಲೆಗಳನ್ನು ಪಡೆಯುವುದಕ್ಕೆ ಸಾಕಷ್ಟು ತೊಂದರೆಗಳಾಗುತ್ತಿವೆ. ಕಾರಣ, ನಗರದಲ್ಲಿ ದೂಡಾ   ಶಾಖಾ ಕಚೇರಿಯನ್ನು ತೆರೆಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ಸಚಿವ ಮಲ್ಲಿಕಾರ್ಜುನ ಅವರು ದಾವಣಗೆರೆಯಲ್ಲಿ ರಸ್ತೆ, ನೀರು ಸೇರಿದಂತೆ ಎಲ್ಲಾ ಅಭಿವೃದ್ಧಿ ಮಾಡಿದ್ದಾರೆ. ಹರಿಹರ ನಗರವನ್ನು ಆ ಮಟ್ಟದಲ್ಲಿ ಅಭಿವೃದ್ಧಿ ಮಾಡಬೇಕು. ವಿದ್ಯುತ್ ದ್ವೀಪಗಳನ್ನು ಶಿವಮೊಗ್ಗದ ಕಡೆ ಬೈಪಾಸ್ ರಸ್ತೆಯವರಿಗೆ, ಮತ್ತು ಹರಪನಹಳ್ಳಿ ರಸ್ತೆಯ ಗುತ್ತೂರಿನವರೆಗೆ ವಿಸ್ತರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದೂಡ ಸದಸ್ಯ ಜಬ್ಬಾರ್ ಸಾಬ್, ಅಯೂಬ್ ಪೈಲ್ವಾನ್, ಸಿ.ಎನ್. ಹುಲುಗೇಶ್, ನಗರಸಭೆ ಸದಸ್ಯರಾದ ಅಲೀಂ ಮುಜಾಮಿಲ್ ಬಿಲ್ಲು, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ರೇವಣಸಿದ್ದಪ್ಪ ಅಮರಾವತಿ, ಅಂದನೂರು ಕೊಟ್ರೇಶ್,  ಹನುಮಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ‌ ಹನುಮಂತಪ್ಪ, ಎಂ. ಎಸ್. ಆನಂದ್, ಎ.ಬಿ. ಬಸವರಾಜ್, ಮಹಮ್ಮದ್ ಪೈರೋಜ್, ಡಾ ಅಜಿತ್ ಹೆಗಡೆ, ಹೋವಳೆ ರವೀಂದ್ರ, ಪ್ರಕಾಶ್ ಕೋಳೂರು, ಸನಾವುಲ್ಲಾ ಸಾಬ್, ಹೆಚ್. ಶಿವಪ್ಪ, ಶೇಖರ್ ಶೆಟ್ಟಿ, ಕೆ.ಜಿ. ರವೀಂದ್ರ, ಹೊಟೇಲ್ ಮಾಲೀಕರಾದ ಸುರೇಶ್ ರಾಜನವರ್, ವಷಿಷ್ಠ ರಾಜನವರ್ ಹಾಗೂ ಇತರರು ಹಾಜರಿದ್ದರು. 

error: Content is protected !!