ಹೊನ್ನಾಳಿ, ಮಾ.6- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಳೆ ದಿನಾಂಕ 7ರ ಗುರುವಾರ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ ಎಂದು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಶಿಬಿರ ಆಯೋಜಕ ಜಿ. ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಕ್ಯಾನ್ಸರ್, ಗರ್ಭಕೋಶ, ಅನ್ನನಾಳ, ಕಿಡ್ನಿ, ಬಾಯಿ, ಸೇರಿದಂತೆ ಇತರೆ ಸಮಸ್ಯೆಗಳಿಗೆ ನುರಿತ ತಜ್ಞರಿಂದ ಯಶಸ್ವೀ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದರು. ಸಂತೋಷ, ನಾಗೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.