ದಾವಣಗೆರೆ, ಫೆ. 12- ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶ್ರೀ ರುದ್ರೇಶ್ವರ ಸ್ವಾಮಿ ಮಠದ ಕಲ್ಯಾಣ ಮಂದಿರದಲ್ಲಿ ಇದೇ ದಿನಾಂಕ 27 ರ ಬುಧವಾರ ನಡೆಯುವ ದಾವಣಗೆರೆ ತಾಲ್ಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ಕಥೆಗಾರ್ತಿ, ಲೇಖಕಿ ಶ್ರೀಮತಿ ಬಿ.ಟಿ. ಜಾಹ್ನವಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ನವರ ನೇತೃತ್ವದಲ್ಲಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪನವರ ಅಧ್ಯಕ್ಷತೆಯಲ್ಲಿ ಗೌರವ ಪೂರ್ವಕವಾಗಿ ಕನ್ನಡದ ಪೇಟ, ಶಾಲು ಹಾಕಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಸುಮತಿ ಜಯಪ್ಪ ಮಾತನಾಡಿ, ಜಾಹ್ನವಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತೋಷವಾಗಿದೆ. ಇದರಿಂದ ಮಹಿಳೆಯರಿಗೆ ಗೌರವ ಸಂದಿದೆ ಎಂದು ಶುಭಾಶಯ ಕೋರಿದರು.
ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತ ನಾಡಿ, ಜಾಹ್ನವಿ ಅವರು ಲೇಖನ, ಕಥೆಗಳ ಮೂಲಕ ಸಮಾಜವನ್ನು ತಿದ್ದುವ, ಮಾರ್ಗ ದರ್ಶನ ಮಾಡುವ ಕೆಲಸ ಮಾಡಿದ್ದಾರೆ, ಇವರು ಬಹುಮುಖ ಪ್ರತಿಭೆಯುಳ್ಳ ಕ್ರಿಯಾಶೀಲ ಬರಹಗಾರರಾಗಿದ್ದಾರೆ. ಇಂತಹವರು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿರುವುದು ಇಡೀ ಸಾಹಿತ್ಯ ವಲಯಕ್ಕೆ ಸಂತೋಷ ತಂದಿದೆ ಹಾಗೂ ಸಮ್ಮೇಳನಕ್ಕೆ ಮೆರಗು ಬಂದಂತಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಕ.ಸಾ.ಪ. ಪದಾಧಿಕಾರಿ ಶ್ರೀಮತಿ ಮಲ್ಲಮ್ಮ, ರುದ್ರಾಕ್ಷಿಬಾಯಿ, ತಾಲ್ಲೂಕು ಕಸಾಪದ ಗೌರವ ಕಾರ್ಯದರ್ಶಿ ನಾಗರಾಜ್ ಸಿರಿಗೆರೆ, ಷಡಕ್ಷರಪ್ಪ ಎಂ.ಬೇತೂರು, ಶಿವಕುಮಾರ್, ಎ.ಎಂ. ಸಿದ್ದೇಶ್ ಕುರ್ಕಿ, ವೀಣಾ ಕೃಷ್ಣಮೂರ್ತಿ, ನಾಗವೇಣಿ, ಎಸ್. ಸಿದ್ದೇಶಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ. ಪರಮೇಶಪ್ಪ, ಸಂಸ್ಕಾರ ಭಾರತಿ ಮಹಾಲಿಂಗಪ್ಪ, ಹರಿಹರ ತಾಲ್ಲೂಕು ಕ.ಸಾ.ಪ ಕಾರ್ಯದರ್ಶಿ ವಿಜಯ ಮಹಾಂತೇಶ, ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೂಮೇಶ್ ಮುಂತಾದವರು ಉಪಸ್ಥಿತರಿದ್ದರು.
ಸಿ.ಜಿ ಜಗದೀಶ್ ಸ್ವಾಗತಿಸಿದರು. ದಾಗಿನಕಟ್ಟೆ ಪರಮೇಶಪ್ಪ ನಿರೂಪಿಸಿದರು. ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು. ಶಿವಕುಮಾರ್ ವಂದಿಸಿದರು.